ಉಡುಪಿ: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ ಬಾಲಿವುಡ್ ನಟ ಆಕ್ಷಯ್ ಕುಮಾರ್ 4ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಖ್ಯಾತ ನಟ ಜಾಕಿಚಾನ್ ಅವರನ್ನು ಹಿಂದಿಕ್ಕಿ ಅಕ್ಷಯ್ ಈ ಸ್ಥಾನ ಪಡೆದಿದ್ದಾರೆ. ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ 2019ರ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಫೋರ್ಬ್ಸ್ ಪಟ್ಟಿಯ ಪ್ರಕಾರ ಟಾಪ್ ಹತ್ತರ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ನಟ ಅಕ್ಷಯ್ ಕುಮಾರ್. ನೂರು ಕೋಟಿ ಕ್ಲಬ್ ಸೇರಿದ ಮಿಷನ್ ಮಂಗಲ್ಅ ಕ್ಷಯ್ ಕುಮಾರ್ ವಾರ್ಷಿಕ ಸಂಭಾವನೆ ಒಟ್ಟು 466 ಕೋಟಿ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅಕ್ಷಯ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ವರ್ಷಕ್ಕೆ ಏನಿಲ್ಲ ಅಂದರು ನಾಲ್ಕರಿಂದ ಐದು ಸಿನಿಮಾಗಳನ್ನು ಮಾಡುತ್ತಾರೆ.
ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ 640 ಕೋಟಿ ಸಂಭಾವನೆ :
ಫೋರ್ಬ್ಸ್ ಪಟ್ಟಿಯ ಪ್ರಕಾರ ಮೊದಲ ಸ್ಥಾನದಲ್ಲಿ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಮೊದಲ ಸ್ಥಾನ ಪಡೆದಿದ್ದಾರೆ. ಅಂದ ಹಾಗೆ ಇವರ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 640 ಕೋಟಿ.
ಎರಡನೆ ಸ್ಥಾನ ಆಸ್ಟ್ರೇಲಿಯದ ನಟ ಕ್ರಿಸ್ ಹೆಮ್ಸ್ ವರ್ತ್ ಪಾಲಾಗಿದೆ. 547 ಕೋಟಿ ಸಂಭಾವನೆ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 473 ಕೋಟಿ ಸಂಭಾವನೆ ಪಡೆಯುವ ಮೂಲಕ ರಾಬರ್ಟ್ ಡೌನಿ ಜೂನಿಯರ್ ಮೂರನೆ ಸ್ಥಾನದಲ್ಲಿದ್ದಾರೆ. ನಾಲ್ಕನೆ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ರೆ, 415 ಕೋಟಿ ಸಂಭಾವನೆ ಪಡೆಯುವ ಮೂಲಕ ನಟ ಜಾಕಿ ಚಾನ್ ಐದನೆ ಸ್ಥಾನದಲ್ಲಿದ್ದಾರೆ.