ಅಜೆಕಾರು; ಪತಿಯ ಆಪರೇಷನ್ ಗೆ ಹಣವಿಲ್ಲದ ಕಾರಣಕ್ಕಾಗಿ ಮನನೊಂದ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ

ಅಜೆಕಾರು; ಪತಿಯ ಆಪರೇಷನ್ ಗೆ ಹಣ ಹೊಂದಿಸಲು ಆಗದ ಕಾರಣ ಮಹಿಳೆಯೊಬ್ಬರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಡಾರು ಗ್ರಾಮದ ಬಾಳೆಹಿತ್ಲು ಎಂಬಲ್ಲಿ ನಡೆದಿದೆ.

ಮೃತರನ್ನು ಅಂಡಾರು ಗ್ರಾಮದ ಬಾಳೆಹಿತ್ಲು ನಿವಾಸಿ 45 ವರ್ಷದ ವನಿತಾ ಎಂದು ಗುರುತಿಸಲಾಗಿದೆ. ವನಿತಾ ಅವರ ಪತಿ ಸತೀಶ್ ಎನ್. ರಾವ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಅದರಂತೆ ಆಪರೇಷನ್ ಗೆ ಹಣದ ವ್ಯವಸ್ಥೆ ಮಾಡಲು ವನಿತಾ ಮನೆಗೆ ಬಂದಿದ್ದು, ಹಣ ಹೊಂದಿಸಲು ಆಗದ ಕಾರಣ ಮನನೊಂದು ಎ‌.13ರಂದು ಬೆಳಿಗ್ಗೆ ಮನೆಯ ಎದುರಿನ‌ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.