ಅಜೆಕಾರು: ಪ್ರಸಿದ್ಧ ಟಿವಿಎಸ್ ದ್ವಿಚಕ್ರ ವಾಹನಗಳ ಕಂಪನಿಯ ನೂತನ ಆದಿಶ್ ಟಿವಿಎಸ್ ಶೋರೂಮ್ ಅಜೆಕಾರಿನ ಪ್ರಿನ್ಸ್ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು.
ಸಾಯಿರಾಧ ಪ್ರಮೊಟರ್ಸ್ ನ ಮನೋಹರ್ ಶೆಟ್ಟಿ ಉದ್ಘಾಟಿಸಿ ಶೋರೂಂ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಾಯಿರಾಧ ಗ್ರೂಪ್ ನ ಸಿದ್ಧಾರ್ಥ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವ ಪೂಜಾರಿ ಕಂಟೆಬೆಟ್ಟು, ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ , ಯೋಗೀಶ್ ಮಲ್ಯ ಕಡ್ತಲ, ಶೋರೂಂನ ಪ್ರವರ್ತಕರಾದ ಸುದೇಶ್ ಶೆಟ್ಟಿ, ಸಮೃದ್ಧ್ ಪ್ರಶಾಂತ್ ಉಪಸ್ಥಿತರಿದ್ದರು.
ಶೋರೂಂನ ಮೊದಲ ಗ್ರಾಹಕರಾಗಿ ಪ್ರಕಾಶ್ ನಾಯಕ್ ಕಡ್ತಲ, ಸುದೇಶ್ ನಾಯಕ್ ಎಣ್ಣೆಹೊಳೆ, ಸಂಜೀವ ಪೂಜಾರಿ ಕಡ್ತಲ ಅವರಿಗೆ ಇದೇ ಸಂದರ್ಭದಲ್ಲಿ ವಾಹನದ ಕೀಯನ್ನು ಹಸ್ತಾಂತರಿಸಲಾಯಿತು.
ಶೋ ರೂಂನಲ್ಲಿ ಮೊದಲ ಐವತ್ತು ಗ್ರಾಹಕರಿಗಾಗಿ ಆಫರ್ ನೀಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗೆ ಮೊ.ನಂ. 73385 81255 ಸಂಪರ್ಕಿಸಬಹುದೆಂದು ಪ್ರವರ್ತಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.












