ಉಡುಪಿ: ಗೆಳೆಯರೊಂದಿಗೆ ಕೆರೆಯಲ್ಲಿ ಮೀನು ಹಿಡಿಯಲು ಹೋದ ಬಾಲಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅಜೆಕಾರು ಠಾಣಾ ವ್ಯಾಪ್ತಿಯ ಎಳ್ಳಾರೆ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಮೃತ ಬಾಲಕನನ್ನು ಎಳ್ಳಾರೆ ಗ್ರಾಮದ ಸೋಮನಾಥ್ ಶೇರಿಗಾರ್ ಎಂಬವರ ಪುತ್ರ ಆದಿತ್ಯ (14) ಎಂದು ಗುರುತಿಸಲಾಗಿದೆ. ಈತ ಇಂದು ಮಧ್ಯಾಹ್ನ ತನ್ನ ಗೆಳೆಯರೊಂದಿಗೆ ಕೆರೆಗೆ ಮೀನು ಹಿಡಿಯಲು ಹೋಗಿದ್ದನು.
ಈ ವೇಳೆ ಆದಿತ್ಯ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಜೊತೆಗಿದ್ದ ಗೆಳೆಯರು ರಕ್ಷಣೆಗೆ ಧಾವಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












