ನೀವೇನಾದ್ರೂ ಕಡಿಮೆ ಬೆಲೆಗೆ ಒಂದೊಳ್ಳೆ ಫೋನ್ ತಗೊಳ್ಬೇಕು ಎನ್ನುವ ಯೋಚನೆಯಲ್ಲಿದ್ದರೆ ಇನ್ನೇನ್ ಲಾಂಚ್ ಆಗ್ತಿದೆ ಒಂದು ಅದ್ಬುತ ಸ್ಮಾರ್ಟ್ ಪೋನ್. ಹೌದು ಖ್ಯಾತ ಮೊಬೈಲ್ ಕಂಪೆನಿ ರಿಯಲ್ಮಿಯ ಮಾಜಿ ಸಿಇಒ ಭಾರತದ ಮಾಧವ್ ಶೇಠ್ ತಮ್ಮ ಹೊಸ ಕಂಪನಿ NxtQuantum Shift Technologies ನಲ್ಲಿ ಭಾರತದ ಮೊದಲ ಸಂಪೂರ್ಣ ಸ್ಥಳೀಯ ಸ್ಮಾರ್ಟ್ಫೋನ್ ಅನ್ನು ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ಗೆ Ai+ ಸ್ಮಾರ್ಟ್ಫೋನ್ ಎಂದು ಬ್ರ್ಯಾಂಡ್ ಮಾಡಲಾಗಿದೆ. ಇದು ದೇಶಿ ಮೊಬೈಲ್ ಫೋನ್ ಎಂದವರು ಹೇಳಿಕೊಂಡಿದ್ದಾರೆ.
ಸದ್ಯ ಪಲ್ಸ್ ಮತ್ತು ನೋವಾ 5G.ಎನ್ನುವ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಲಾಗಿದ್ದು ಈ ಪೋನ್ ನ ಬೆಲೆ ಕೇವಲ 4,499 ದಿಂದ ಆರಂಭವಾಗುತ್ತದೆ. ಈ ಮೊಬೈಲ್ ಸ್ಟೋರೇಜ್ ನ ಬಾಸ್ ಎಂದು ಕಂಪೆನಿ ವಿಶ್ಲೇಷಿಸಿದೆ.

AI PLUS ಕೇವಲ 4,499 ರಿಂದ ಪ್ರಾರಂಭ, ನೋವಾ 5G ಯ ಆರಂಭಿಕ ಬೆಲೆ 7,499. ಎರಡೂ ಫೋನ್ಗಳಿಗೆ 6.7-ಇಂಚಿನ HD+ ಡಿಸ್ಪ್ಲೇ ಇದೆ. 50-ಮೆಗಾಪಿಕ್ಸೆಲ್ ಡ್ಯುಯಲ್ AI ಹಿಂಭಾಗದ ಕ್ಯಾಮೆರಾ ಸೆಟಪ್ ಇದೆ. ಬ್ಯಾಟರಿ 5000mAh ಆಗಿದೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಇದೆ.
T615 ಚಿಪ್ಸೆಟ್ ಹೊಂದಿದ್ದು, ಆರಂಭಿಕ ಹಂತದ ಬಳಕೆದಾರರಿಗೆ ದಿ ಬೆಸ್ಟ್ ಫೋನ್. ನೋವಾ 5G T8200 ಅದ್ಬುತ ಪ್ರೊಸೆಸರ್ ಹೊಂದಿದೆ. ಎರಡೂ ಮಾದರಿಗಳಲ್ಲಿ 1TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಬಹುದು. ಒಟ್ಟು ಐದು ಬಣ್ಣಗಳಲ್ಲಿ ಈ ಫೊನ್ ಗಳು ಲಭ್ಯವಿದೆ. ಇದೇ ಜುಲೈ 12 ಮತ್ತು 13 ರಿಂದ ಫ್ಲಿಫ್ ಕಾರ್ಟ್ ನಲ್ಲಿ ಸೇಲ್ ಶುರುವಾಗಲಿದ್ದು ಕಡಿಮೆ ಬೆಲೆಯಲ್ಲಿ ಒಂದೊಳ್ಳೆ ಫೋನ್ ಖರೀದಿಸುವ ಯೋಚನೆ ಇದ್ದರೆ ಈ ಫೋನ್ ಅನ್ನು ಮಿಸ್ ಮಾಡ್ಕೊಬೇಡಿ.












