ಕೊಪ್ಪಳ: ಅಪೌಷ್ಟಿಕತೆ ಕೊನೆಗೊಳಿಸುವಿಕೆ – ಅಪೌಷ್ಟಿಕತೆಯ ಹೊರೆಯನ್ನುಕಡಿಮೆ ಮಾಡುವ ಒಂದು ನವೀನ ಸಾರ್ವಜನಿಕ ಆರೋಗ್ಯ ಪರಿಕಲ್ಪನೆಯನ್ನು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ECIPH) (ಯೆನೆಪೊಯ ಜೊತೆಗಿನ ಸಿಎಚ್‌ಡಿ ಗ್ರೂಪ್ ಮತ್ತು ಸುಧಾರಿತ ತಾಂತ್ರಿಕ ಸಹಕಾರ ಕೇಂದ್ರದ ಒಂದು ಘಟಕ) ನಿಂದ ಪರಿಚಯಿಸಲಾಗಿದೆ.
ಈ ಉಪಕ್ರಮವನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ ಪ್ರಾಯೋಗಿಕವಾಗಿ ನಡೆಸಲಾಯಿತು. ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವಾಗಿ ಜಾರಿಗೊಳಿಸಲಾಯಿತು. ಈ ಉಪಕ್ರಮವು ತೀವ್ರವಾದ ಅಪೌಷ್ಟಿಕತೆ ಹೊಂದಿರುವ ಐದು ವರ್ಷಕ್ಕಿಂತಕಡಿಮೆ ವಯಸ್ಸಿನ ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆಗೊಳಿಸುವ ಮತ್ತು ಮಧ್ಯಮ ತೀವ್ರ ಅಪೌಷ್ಟಿಕತೆಯ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಕಾರದಿಂದ ಸಿಎಚ್‌ಡಿ ಗ್ರೂಪ್ ಇದನ್ನುಅನುಷ್ಠಾನಗೊಳಿಸಿದೆ. ನಿಧಿಯ ಕೊರತೆಯಿಂದಾಗಿ, ಯೋಜನೆಯನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲಾಗಿತ್ತು.
ಆಗಸ್ಟ್ 2022 ರಲ್ಲಿ 31 ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಂದ, ಮಾರ್ಚ್ 2023 ರಲ್ಲಿ ಸಂಖ್ಯೆ 11ಕ್ಕೆ ಇಳಿದಿದೆ. ಅಂತೆಯೇ ಸೆಪ್ಟೆಂಬರ್ 2022 ರಲ್ಲಿ 1067 ಮಧ್ಯಮ ತೀವ್ರ ಅಪೌಷ್ಟಿಕತೆಯ ಮಕ್ಕಳಿಂದ, ಮಾರ್ಚ್ 2023 ರಲ್ಲಿ ಸಂಖ್ಯೆ 329 ಕ್ಕೆ ಇಳಿದಿದೆ.
ಅಪೌಷ್ಟಿಕತೆಯ ಸಮಸ್ಯೆಗಳನ್ನು ಕೊನೆಗೊಳಿಸಲು ಈ ಮಾದರಿಯು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೆಲಸ ಮಾಡಿದೆ. ಐದು ವರ್ಷದೊಳಗಿನ ಮಕ್ಕಳ ಪಾಲಕರು, ಅಂಗನವಾಡಿ ಮೇಲ್ವಿಚಾರಕರು, ಸಮುದಾಯದ ಹಿರಿಯರು, ಚುನಾಯಿತ ಪ್ರತಿನಿಧಿಗಳು, ನಂಬಿಕೆ ಆಧಾರಿತ ಮುಖಂಡರು ಅಪೌಷ್ಟಿಕತೆಯ ಹೊರೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿಒಗ್ಗೂಡಿದರು. ಕಡಿಮೆ-ವೆಚ್ಚದ ಪೌಷ್ಟಿಕಾಂಶದ ಆಹಾರ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ದೈನಂದಿನ ತೂಕ ಹೆಚ್ಚಳದ ರೆಕಾರ್ಡಿಂಗ್ ಮತ್ತು ಸಾಪ್ತಾಹಿಕ ಎತ್ತರದ ದಾಖಲೆಗಳು, ತಾತ್ಕಾಲಿಕ ಮೇಲ್ವಿಚಾರಣೆ, ಉತ್ತಮ ಪೋಷಣೆಯಕಡೆಗೆ ನಿವೃತ್ತಜನರ ಒಳಗೊಳ್ಳುವಿಕೆ ಮತ್ತು ತಯಾರಿಕೆಯಲ್ಲಿ ಪೋಷಕರಿಗೆ ಸಹಕಾರ- ಇವುಗಳು ಯಶಸ್ಸನ್ನು ಸಾಧಿಸುವಲ್ಲಿ ಪ್ರಮುಖ ಕಾರಣವಾಗಿದೆ.
ಭಾರತದಲ್ಲಿನ ಕರ್ನಾಟಕ ರಾಜ್ಯದ ಯಲಬುರ್ಗಾ ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿಗಳಿಗೆ ಅವರ ಪೋಷಕರು ಮಕ್ಕಳಿಗೆ ಒದಗಿಸಬೇಕಾದ ಕಡಿಮೆ-ವೆಚ್ಚದ ಶಕ್ತಿಯುತ ಆಹಾರದ ವಿಷಯದಲ್ಲಿ ಬೆಂಬಲದ ಮೇಲ್ವಿಚಾರಣೆ ಮತ್ತು ಸಹಕಾರವನ್ನು ನೀಡಲಾಯಿತು.
500 ಯುವ ಸ್ವಯಂ ಸೇವಕರನ್ನುಗುರುತಿಸಲಾಗಿದ್ದು, ಮಕ್ಕಳಿಗೆ ಕಡಿಮೆ ದರದ ಪೌಷ್ಟಿಕ ಆಹಾರ ಕ್ರಮಗಳನ್ನು ನೀಡಲಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಶೇಂಗಾ ಚಿಕ್ಕಿಯಿಂದ ಹಿಡಿದು ಬೇಳೆ ಪಾಯಸ, ಚಿತ್ರಾನ್ನ, ಅನ್ನ ಸಾಂಬಾರು, ಮೊಳಕೆ ಕಾಳು, ಗೋಧಿ ಪಾಯಸ, ಉಪ್ಪಿಟ್ಟು ಹೀಗೆ ದಿನ ನಿತ್ಯ ಪೌಷ್ಟಿಕ ಆಹಾರ ನೀಡಲಾಯಿತು. ಜೊತೆಗೆ ಮನೆಗಳಲ್ಲಿ, ಐದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಬಲವರ್ಧಿತ ಆಹಾರ ಮಿಶ್ರಣಗಳನ್ನು ತಯಾರಿಸಲು ಪೋಷಕರಿಗೆ ಕಲಿಸಲಾಯಿತು.
ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ನಿರ್ದೇಶಕ ಡಾ.ಎಡ್ಮಂಡ್ ಫೆರ್ನಾಂಡಿಸ್ ಈ ವಿಷಯದ ಕುರಿತು ಮಾತನಾಡುತ್ತಾ, ಇಂತಹ ಪರಿಕಲ್ಪನೆಗಳು 2030 ರ ವೇಳೆಗೆ ಭಾರತದಿಂದ ಅಪೌಷ್ಟಿಕತೆಯನ್ನು ತೊಡೆದು ಹಾಕಬಹುದು. ಆದರೆ ಗಂಭೀರವಾದ ರಾಜಕೀಯ ಇಚ್ಛಾಶಕ್ತಿ, ಸಾಪ್ತಾಹಿಕ, ಬೆಂಬಲಿತ ಮೇಲ್ವಿಚಾರಣೆ ಮತ್ತು ಪೋಷಕರ ಸಹಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.
ಮಗುವಿನ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸದ ಪೋಷಕರಿಗೆ ತಿಳುವಳಿಕೆ ನೀಡಿ, ಮಗುವಿನ ಅತ್ಯುತ್ತಮ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯವಾಗಿ ರಚಿಸಲಾದ ಮೇಲ್ವಿಚಾರಕ ಪಂಗಡಗಳಿಗೆ, ಈ ಪರೀಕ್ಷಿಸಿದ ಮಾದರಿಯು ಉನ್ನತ ಮಟ್ಟದ ಸಾಮರ್ಥ್ಯದೊಂದಿಗೆ ಅದ್ಭುತ ಫಲಿತಾಂಶಗಳನ್ನು ನೀಡಿರುವುದರಿಂದ ಅಪೌಷ್ಟಿಕತೆಯನ್ನು ಕೊನೆಗೊಳಿಸುವ ಗಂಭೀರ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಯಾವುದೇ ರಾಜ್ಯ ಸರ್ಕಾರಕ್ಕೆ ತಮ್ಮ ನಿರ್ದೇಶನಗಳ ಪ್ರಕಾರ ಬೆಂಬಲವನ್ನು ಡಾ. ಎಡ್ಮಂಡ್ ಫೆರ್ನಾಂಡಿಸ್ ಸಿದ್ಧರಿದ್ದಾರೆ.