ಉಡುಪಿ: ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿಯ ಪ್ರಾಮಾಣಿಕತೆ ಬಹುಮುಖ್ಯವಾದುದು.ಈ ಪ್ರಾಮಾಣಿಕತೆಯಿಂದಲೇ ಸಂಘಗಳು ಜನರಿಗೆ ಹತ್ತಿರವಾಗುತ್ತದೆ. ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಕೂಡ ಜನರಿಗೆ ಪ್ರಾಮಾಣಿಕವಾದ ಸೇವೆ ನೀಡಿ ಹತ್ತಿರವಾಗಿದೆ. ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅವರು, ಸಾಹೇಬರಕಟ್ಟೆ ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅತ್ತುತ್ತಮ ಮತ್ತು ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ನಿರ್ಮಿಸುವ ಯಶಸ್ಸಿನ ಹಿಂದೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಪ್ರಾಮಾಣಿಕ ಪರಿಶ್ರಮವಿದೆ.ಈ ಪರಿಶ್ರಮ ಎಲ್ಲರಿಗೂ ಮಾದರಿ. ಸಂಸ್ಥೆ ಒಂದಷ್ಟು ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ದೇಣಿಗೆ ನೀಡಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ಗರಿಕೆಮಠ ಅರ್ಕ ಗಣಪತಿ ದೇವಸ್ಥಾನದ ಅರ್ಚಕ ವೇ.ಮೂ. ರಾಮಪ್ರಸಾದ್ ಅಡಿಗ ಭದ್ರತಾ ಕೋಶ ಉದ್ಘಾಟಿಸಿ, ಸಂಸ್ಥೆ ಧಾರ್ಮಿಕ ಚಟುವಟಿಕೆಗಳಿಗೂ ಬೆಂಬಲ ನೀಡುತ್ತ ಬಂದಿದೆ. ಸೇವಾ ಮನೋಭಾವನೆ ಇರುವ ಇಂತಹ ಸಂಸ್ಥೆ ಸಮಾಜಮುಖಿಯಾಗಿ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿದೆ. ಮುಂದೆಯೂ ಸಂಸ್ಥೆಗೆ ಇನ್ನಷ್ಟು ಶಾಖೆಗಳನ್ನು ಸ್ಥಾಪಿಸುವ ಶಕ್ತಿ ಬರಲಿ ಎಂದರು.
ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆಯನ್ನು ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಾಹೇಬರಕಟ್ಟೆ ಅಶೋಕ್ ಪ್ರಭು ವಹಿಸಿದ್ದರು.
ಸೌಹಾರ್ದ ಸಿರಿ ನೂತನ ಕಟ್ಟಡವನ್ನು ಶಿರಾಲಿಯ ಶ್ರೀ ಮಹಾಗಣಪತಿ ಮಾಹಮ್ಮಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಿನಾಥ್ ಕಾಮತ್, ಭದ್ರತಾ ಕೊಠಡಿಯನ್ನು ಪಾಂಡುರಂಗ ನಾಯಕ್, ಆಡಳಿತ ಕಚೇರಿ ಸಭಾಂಗಣವನ್ನು ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಅಧ್ಯಕ್ಷರ ಕೊಠಡಿಯನ್ನು ಅಧ್ಯಕ್ಷರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ನಿರ್ದೇಶಕ ಎಸ್. ಕೆ. ಮಂಜುನಾಥ, ಗಣಕ ಯಂತ್ರವನ್ನು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಉದ್ಘಾಟಿಸಿದರು.
ಸೌಹಾರ್ದ ಸಿರಿ’ ಠೇವಣಿ ಪತ್ರವನ್ನು ಸ್ಥಾಪಕಾಧ್ಯಕ್ಷರಾದ ಶಿರಿಯಾರ ಪ್ರಭಾಕರ್ ನಾಯಕ್ ಹಸ್ತಾಂತರಿಸಿ, ಎಲ್ಲರೂ ಸಂಸ್ಥೆ ಅಭಿವೃದ್ಧಿಗೆ,ಬೆಳವಣಿಗೆಗೆ ಎಂದಿಗೂ ಸಹಕಾರ ನೀಡಬೇಕು.ಎಲ್ಲರೂ ಕೈಜೋಡಿಸಿದಾಗಲಷ್ಟೇ ಅಭಿವೃದ್ದಿ ಏಳಿಗೆ ಸಾಧ್ಯ. ಅದರಿಂದ ಊರಿನ ಅಭಿವೃದ್ದಿಗೂ ಕೂಡ ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್ ಹಾಗೂ ಅಧ್ಯಕ್ಷ ಅಶೋಕ್ ಪ್ರಭು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಸಂಘದ ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಯಡ್ತಾಡಿ ಗ್ರಾಮ” ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಎಚ್. ನಾರಾಯಣ ಶೆಣೈ ಗಾವಳಿ, ಸಂಘದ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ, ವೆಂಕಟೇಶ್ ಪೈ ಸಾಸ್ತಾನ, ಪ್ರಸಾದ್ ಆರ್. ಭಟ್, ಜಗದೀಶ್ ಹೆಗ್ಡೆ, ರಾಘವೇಂದ್ರ ಪ್ರಭು, ಪಲ್ಲವಿ ವೈ.ನಾಯಕ್, ಸುನಿತಾ ಹೆಗ್ಡೆ ಭಾಗವಹಿಸಿದ್ದರು. ಯಡ್ತಾಡಿ ಜಯಲಕ್ಷ್ಮಿ ಕಾಮತ್ ಪ್ರಾರ್ಥಿಸಿದರು.
ಕಾರ್ಯನಿರ್ವಹಣಾಧಿಕಾರಿ ಎತ್ತಿನಟ್ಟಿ ಶಿವಾನಂದ ಶ್ಯಾನುಭಾಗ್ ವರದಿ ಮಂಡಿಸಿದರು. ನಿರ್ದೇಶಕ ಎಂ.ರವೀಂದ್ರನಾಥ ಕಿಣಿ ಸ್ವಾಗತಿಸಿದರು. ನಿರ್ದೇಶಕ ಮಾಧವ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ನಾಯಕ್ ಶಿರಿಯಾರ ಕಾರ್ಯಕ್ರಮ ನಿರೂಪಿಸಿದರು. ಯು ಪ್ರಸಾದ್ ಭಟ್ ವಂದಿಸಿದರು.
































