ಕಟಪಾಡಿ: ಇಲ್ಲಿನ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಡಿ.1ರಂದು ಹಮ್ಮಿಕೊಳ್ಳಲಾಯಿತು. ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಲಹೆಗಾರ್ತಿ ಶ್ರೀಮತಿ ರೋಶಿನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎಚ್ಐವಿ ಹಾಗೂ ಏಡ್ಸ್ ನಡುವಿನ ವ್ಯತ್ಯಾಸಗಳನ್ನು, ರೋಗದ ಲಕ್ಷಣಗಳನ್ನು, ರೋಗ ಹರಡುವ ವಿಧಾನ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನಾವು ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ
ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಂದುರೀತಿ ಇವರು ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಸಂತೋಷ್ ಶೆಟ್ಟಿ, ಯೂತ್
ರೆಡ್ ಕ್ರಾಸ್ ಸಂಘದ ಅಧಿಕಾರಿ ಶ್ರೀಮತಿ ಚೇತನಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿನಿ ದೇವಿಹಿತೈಷಿ ನಿರೂಪಿಸಿದರು. ವಿದ್ಯಾರ್ಥಿ ಮೋಯಿದಿನ್ ಅಲಿ ಸ್ವಾಗತಿಸಿ, ವರ್ಷಿಣಿ ಆರ್ ವೈದ್ಯ ವಂದಿಸಿದರು.