ಇದು AI ಯುಗ, ಆದರೆ ಆ AI ಯಿಂದಲೇ ನಾವು ಪಡೆದುಕೊಂಡಷ್ಟು ಕೆಲವೊಂದನ್ನು ಕಳೆದುಕೊಳ್ಳುತ್ತಲೂ ಇದ್ದೇವೆ. AI ನಿಂದಲೇ ಸೈಬರ್ ಅಪರಾಧಗಳೂ ಏರಿಕೆಯಾಗುತ್ತಿವೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರೇ ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಇತ್ತೀಚೆಗೆ ಟ್ರೆಂಡಿಂಗ್ AI ಆ್ಯಪ್ ‘ನ್ಯಾನೋ ಬನಾನಾ’ಗೆ ತಮ್ಮ ಫೋಟೋ ಅಪ್‌ಲೋಡ್ ಮಾಡಿದವರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಕೆಲವರಿಗಂತೂ ಖಾತೆಯಿಂದ 70 ಸಾವಿರ ರೂಪಾಯಿಗಳು ಮಾಯವಾಗಿವೆ. ಈ ಘಟನೆಯು AI ಆ್ಯಪ್‌ಗಳ ಬಳಕೆಯಲ್ಲಿ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳುತ್ತದೆ.
ವೇಮುಲವಾಡ ಜಿಲ್ಲೆಯಲ್ಲಿಇತ್ತೀಚೆಗೆ ಯುವಕನೊಬ್ಬ ಆ್ಯಪ್‌ನಲ್ಲಿ ತನ್ನ ಫೋಟೋವನ್ನು AI ಜೆಮಿನಿ ತಂತ್ರಜ್ಞಾನದ ಮೂಲಕ 3D ಆಯಾಮದಲ್ಲಿ ನೋಡಿ ಸಂತೋಷಪಟ್ಟಿದ್ದ. ಆದರೆ, ಕೆಲವೇ ನಿಮಿಷಗಳಲ್ಲಿ ಅವನ ಖಾತೆಯಿಂದ ಹಣ ಡೆಬಿಟ್ ಆಗಿದೆ, ಆತಂಕಗೊಂಡ ಯುವಕ ತಕ್ಷಣ ಪೊಲೀಸರಿಗೆ ದೂರು ನೀಡಿದ.ಈ ಆ್ಯಪ್‌ಗಳು ಆಕರ್ಷಕ ವೈಶಿಷ್ಟ್ಯಗಳನ್ನು ತೋರಿಸಿ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ದೋಚಿಕೊಳ್ಳುತ್ತವೆ ಎಂದು ತಿಳಿದುಬಂದಿದೆ.

ಎಚ್ಚರಿಕೆ ವಹಿಸಿ:
ಸೈಬರ್ ಅಪರಾಧಿಗಳ ಹೊಸ ತಂತ್ರಗಳು AI ಆಧಾರಿತ ಆ್ಯಪ್‌ಗಳ ಮೂಲಕ ವೈಯಕ್ತಿಕ ಫೋಟೋಗಳನ್ನು 3D ಮಾದರಿಗಳಾಗಿ ಪರಿವರ್ತಿಸುವಂತೆ ಮಾಡಿ ಬಳಕೆದಾರರನ್ನು ಆಕರ್ಷಿಸುತ್ತವೆ. ಫೋಟೋ ಅಪ್‌ಲೋಡ್ ಮಾಡುವಾಗ, ಫೋನ್‌ನಲ್ಲಿರುವ ಬ್ಯಾಂಕ್ ವಿವರಗಳು, UPI ಪಿನ್ ಮತ್ತು ಇತರ ಸೂಕ್ಷ್ಮ ಮಾಹಿತಿಗಳು ಅಪರಾಧಿಗಳ ಕೈಗೆ ಸೇರುವ ಅಪಾಯವಿದೆ. ‘ನ್ಯಾನೋ ಬನಾನಾ’ ಆ್ಯಪ್‌ನಂತಹ ಟ್ರೆಂಡಿಂಗ್ ಆಯ್ಕೆಗಳು ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಂಡು ಮಾಲ್ವೇರ್ ಅಥವಾ ಡೇಟಾ ಥೆಫ್ಟ್‌ಗೆ ಕಾರಣವಾಗುತ್ತವೆ
1930 ಹೆಲ್ಪ್ಲೈನ್ಗೆ ಕರೆ ಮಾಡಿ:
ಅಪರಿಚಿತ APK ಫೈಲ್‌ಗಳು, WhatsApp ಲಿಂಕ್‌ಗಳು ಅಥವಾ ಅಜ್ಞಾತ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. AI ಆ್ಯಪ್‌ಗಳಲ್ಲಿ ಫೋಟೋ ಅಪ್‌ಲೋಡ್ ಮಾಡಿದರೆ, ತಕ್ಷಣ ಇತಿಹಾಸವನ್ನು ಪರಿಶೀಲಿಸಿ ಅಳಿಸಿಹಾಕಿ ಎಂದು ಸಲಹೆ ನೀಡಲಾಗಿದೆ. ಸೈಬರ್ ಅಪರಾಧಕ್ಕೆ ಬಲಿಯಾದರೆ, 1930 ಹೆಲ್ಪ್‌ಲೈನ್‌ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ












