ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆಯ ಶ್ರೀ ದೇವರ ಸನ್ನಿಧಿಯಲ್ಲಿ ಮಂಗಳವಾರ ಮಹೋತ್ಸವಕ್ಕೆ ದೇವಳದ ಅರ್ಚಕ ವಿನಾಯಕ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು. ಭಜನಾ ಮಂಟಪದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ ಭಜನೆ ಆರಂಭಗೊಂಡಿತು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಮತ್ಸ್ಯಾವತಾರ ಅಲಂಕಾರ ಹಾಗೂ ದೇವಾಲಯಕ್ಕೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಕ್ಷೇತ್ರದಲ್ಲಿ ಊರಿನ ಹಲವು ಭಜನಾ ಮಂಡಳಿಗಳಿಂದ 7 ದಿನಗಳ ಕಾಲ ಅಹೋ ರಾತ್ರಿ ನಿರಂತರ ಭಜನೆ ನೆಡೆಯಲಿದೆ.

ದೇವಳದ ಆಡಳಿತ ಮೊಕ್ತೇಶ್ವರ ಪಿ ವಿ ಶೆಣೈ, ವಸಂತ ಕಿಣೆ, ರೋಹಿತಾಕ್ಷ ಪಡಿಯಾರ್, ಪುಂಡಲೀಕ ಕಾಮತ್, ಗಣೇಶ ಕಿಣಿ, ವಿಶ್ವನಾಥ ಭಟ್ , ವಿವೇಕ ಶ್ಯಾನ್ ಭೋಗ್ , ಸತೀಶ್ ಕಿಣಿ, ಭಾಸ್ಕರ ಶೆಣೈ, ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಎಸ್.ಬಿ ಯುವಕ ಮಂಡಳಿ ಮತ್ತು ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.