ನವದೆಹಲಿ: ಸೋನಿಯಾ ಗಾಂಧಿ ಅವರಿಗೆ ಕೋವಿಡ್-19 ಪಾಸಿಟಿವ್ ಎಂದು ವರದಿಯಾಗಿದೆ ಎಂದು ಕಾಂಗ್ರೆಸ್ನ ರಣದೀಪ್ ಸುರ್ಜೇವಾಲಾ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದೆ. ಅವರು ಸೌಮ್ಯ ಜ್ವರ ಮತ್ತು ಕೆಲವು ರೋಗಲಕ್ಷಣಗಳನ್ನುಹೊಂದಿದ್ದು, ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಅವರಿಗೆ ಅಗತ್ಯ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ (ಇಡಿ) ಅಧಿಕೃತ ನೋಟಿಸ್ನಲ್ಲಿ ಜೂನ್ 8 ರಂದು ಸೋನಿಯಾ ಗಾಂಧಿ ಮತ್ತು ಜೂನ್ 2 ರಂದು ರಾಹುಲ್ ಗಾಂಧಿಗೆ ತನಿಖೆಗಾಗಿ ಏಜೆನ್ಸಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ರಾಹುಲ್ ತಾನು ನಗರದಲ್ಲಿಲ್ಲ ಎನ್ನುವ ಸಬೂಬು ನೀಡಿ ಕಾಲಾವಕಾಶ ಕೋರಿ ಜೂನ್ 5 ರ ಬಳಿಕ ಸಮಯ ನಿಗದಿ ಮಾಡುವಂತೆ ಕೇಳಿದ್ದಾರೆ ಎಂದು ಪಕ್ಷದ ಮೂಲಗಳು ಬುಧವಾರ (ಜೂನ್ 1) ತಿಳಿಸಿವೆ.
“ಬ್ರಿಟಿಷರು ಮತ್ತು ಅವರ ದೌರ್ಜನ್ಯಕ್ಕೆ ಹೆದರದ ಕಾಂಗ್ರೆಸ್, ಇಡಿ ನೋಟಿಸ್ಗಳು ಸೋನಿಯಾ ಗಾಂಧೀಜಿ, ರಾಹುಲ್ ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷದ ಧೈರ್ಯವನ್ನು ಹೇಗೆ ಮುರಿಯುತ್ತವೆ, ನಾವು ಹೋರಾಡುತ್ತೇವೆ. ನಾವು ಗೆಲ್ಲುತ್ತೇವೆ. ನಾವು ತಲೆಬಾಗುವುದಿಲ್ಲ,ನಾವು ಹೆದರುವುದಿಲ್ಲ” ಎಂದು ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್ನಿಂದ ಟ್ವೀಟ್ ಮಾಡಿದೆ.