ಗಗನಕ್ಕೇರಿದ ಖಾಸಗಿ ಬಸ್ ಟಿಕೆಟ್ ದರ: ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅಧಿಕೃತ ಹೊರೆ

ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿದ್ದು, ಕೆಲಸದ ಪ್ರದೇಶಗಳಿಂದ ತಮ್ಮ ಹುಟ್ಟೂರಿಗೆ ಹಿಂದಿರುಗುವವರ ದಂಡೇ ಬಸ್ ನಿಲ್ದಾಣಗಳಲ್ಲಿ ಕಾಣಸಿಗುತ್ತವೆ. ಈ ಮಧ್ಯೆ ಖಾಸಗಿ ಬಸ್ ದರಗಳು ಗಗನಕ್ಕೇರಿವೆ. ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ಸಾಗುವ ಖಾಸಗಿ ಬಸ್ ದರಗಳು ಏರಿಕೆಯಾಗಿವೆ.

ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್‌ನಲ್ಲಿ ಸಾಮಾನ್ಯವಾಗಿ 800 ರೂಪಾಯಿ ಬೆಲೆಯ ಸೀಟು ಇದೀಗ 2000 ರೂಪಾಯಿಗೆ ಮಾರಾಟವಾಗುತ್ತಿದೆ. ಹವಾನಿಯಂತ್ರಿತ ಸ್ಲೀಪರ್ ಬಸ್‌ ನಲ್ಲಿ ಉಳಿದ ದಿನಗಳಲ್ಲಿ 1,000 ರೂ.ಕ್ಕೆ ದೊರಕುವ ಸೀಟ್ ಗೆ ಈಗ 3,000ರೂ ಅಥವಾ ಅದಕ್ಕೂ ಹೆಚ್ಚು ಬೆಲೆ ತೆರಬೇಕಾಗಿದೆ. ಕೆಲವು ಬಸ್‌ಗಳ ದರಗಳು 5,000 ರೂ.ಗಳಷ್ಟಿದ್ದು, ವಿಮಾನ ದರಗಳಿಗೆ ಪ್ರತಿಸ್ಪರ್ಧೆ ಮಾಡುವಂತಿದೆ. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ಅಧಿಕೃತ ಹೊರೆ ಬಿದ್ದಿದೆ.

ಅಕ್ಟೋಬರ್ 21 ಮತ್ತು 22 ರಂದು ಪ್ರಯಾಣಿಸಲು ವಿಪರೀತ ದರವನ್ನು ವಿಧಿಸಲಾಗುತ್ತಿದ್ದರೂ ಸಾರಿಗೆ ಇಲಾಖೆ ನಿದ್ರಾಮಗ್ನವಾಗಿದೆ. 2015-16 ರಲ್ಲಿ, ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದು, ಪ್ರತಿ ಕಿಲೋಮೀಟರ್ ಆಧಾರದ ಮೇಲೆ ಬಸ್ ಪ್ರಯಾಣ ದರದಲ್ಲಿ “ಸಮಂಜಸ” ಮಿತಿಯನ್ನು ಶಿಫಾರಸು ಮಾಡಿದೆ. ಸರ್ಕಾರವು ಪ್ರಸ್ತಾವನೆಯನ್ನು ನಿರ್ಲಕ್ಷಿಸಿದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಅಧಿಕಾರಿಯ ಪ್ರಕಾರ, ಇಲಾಖೆ ಎಚ್ಚೆತ್ತು ಇನ್ನೂ ಕಾರ್ಯನಿರ್ವಹಿಸಬಹುದು. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಸ್ ನಿರ್ವಾಹಕರಿಗೆ ದಂಡ ವಿಧಿಸಬಹುದು. ಮೊದಲ ಅಪರಾಧಕ್ಕೆ 5,000 ರೂ. ಮತ್ತು ಎರಡನೇ ಅಪರಾಧಕ್ಕೆ 10,000 ರೂ. ನಷ್ಟು ದಂಡ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಕ್ಕೆ ಬಸ್ ಪರವಾನಗಿಗಳನ್ನು ಅಮಾನತುಗೊಳಿಸಬಹುದು ಅಥವಾ ವಿಪರೀತ ಸಂದರ್ಭಗಳಲ್ಲಿ ರದ್ದುಗೊಳಿಸಬಹುದು. ದೂರದ ಬಸ್‌ಗಳನ್ನು ನಿರ್ವಹಿಸುವ ಕಂಪನಿಗಳಿಗೆ ಪ್ರವಾಸಿ ಪರವಾನಗಿಗಳನ್ನು ನೀಡಲಾಗುತ್ತದೆ, ಅವುಗಳನ್ನು ವಿರಳವಾಗಿ ಅಮಾನತುಗೊಳಿಸಲಾಗುತ್ತದೆ ಅಥವಾ ರದ್ದುಗೊಳಿಸಲಾಗುತ್ತದ ಎಂದು ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.