ಆಗುಂಬೆಯ ಪ್ರೇಮ ಸಂಜೆಯ ಅಂತೆಲ್ಲಾ ನಾವು ಆಗುಂಬೆಯ ಸೂರ್ಯಾಸ್ತ ಸವಿಯುತ್ತಿದ್ದರೆ, ಆಗುಂಬೆಯ ಮಳೆಯಲ್ಲಿ ಪ್ರತೀ ಮುಂಗಾರಿನಲ್ಲೂ ನೆನೆದು ಖುಷಿಪಡುತ್ತಿದ್ದರೆ, ನಮಗೆ ಜೀವ ರಕ್ಷೆಯಾದ ಉಸಿರಾಧ ಆಗುಂಬೆಯ ಮಳೆಕಾಡಿನ ಸುಮಾರು 256 ಮರಗಳನ್ನು ಕಡಿದು ಅಗಲೀಕರಣ ಮಾಡಲು ಹೊರಟಿದೆ ಸರಕಾರ.
ಏನಿದು ಯೋಜನೆ?
ಮೇಗರವಳ್ಳಿ ವಲಯದ ಪರಿಮಿತಿಯಲ್ಲಿನ 2ನೇ ಕಿಲೋಮೀಟರ್ನಿಂದ. 15.98 ಕಿಲೋಮೀಟರ್ವರೆಗಿನ ತೀರ್ಥಹಳ್ಳಿಯಿಂದ ಮೇಗರವಳ್ಳಿವರೆಗಿನ ರಸ್ತೆಯ ದ್ವಿಪಥೀಕರಣಕ್ಕಾಗಿ 256 ಮರಗಳನ್ನ ಕಡಿದು ತೆರವುಗೊಳಿಸುವ ಪರಿಸರ ವಿರೋಧಿ ಯೋಜನೆ ಇದು.ಈ ಯೋಜನೆಯಿಂದ ಆಗುಂಬೆ-ಮೇಗರವಳ್ಳಿ-ತೀರ್ಥಹಳ್ಳಿ ಪ್ರದೇಶದಲ್ಲಿರುವ ಅಮೂಲ್ಯ ಮರಗಳೇ ನಾಶವಾಗಲಿದೆ.ಇಷ್ಟು ಪ್ರಮಾಣದಲ್ಲಿ ಮರಗಳನ್ನು ಕಡಿಯುವುದರಿಂದ ಮಲೆನಾಡಿನ ಜೀವಂತಿಕೆ, ಕಾಡು,ಎಲ್ಲವೂ ಅಲ್ಲೋಲ ಕಲ್ಲೋಲವಾಗಲಿದೆ,
ವಿದ್ಯಾರ್ಥಿಗಳಿಂದ ಯೋಜನೆಗೆ ವಿರೋಧ:
ಈಗಾಗಲೇ ಈ ಯೋಜನೆಯನ್ನು ಕೈ ಬಿಡಬೇಕು ಪರಿಸರ ನಾಶವಾಗುವ ಇಂತಹ ವಿದ್ವಂಸಕ ಕೃತ್ಯವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ನೈಸರ್ಗಿಕವಾಗಿ ತಾವೆ ತಾವಾಗಿ ಬೆಳೆದು ಉಳಿದು ನಿಂತಿರುವ ಮತ್ತು ಹತ್ತಿರ ಹತ್ತಿರ ಶತಮಾನಗಳಷ್ಟು ಪ್ರಾಯವಾಗಿರುವ ಇಕ್ಕೆಲದ ಮರಗಳ ಮೇಲೆ “ಅಭಿವೃದ್ಧಿಗೆ ಅಡ್ಡಿಯಾಗಿರುವ” ಎಂಬ ಆರೋಪ ಹೊರೆಸಿ ಅವುಗಳನ್ನು ಕಡಿಯುವುದು ದೊಡ್ಡ ದ್ರೋಹ ಎಂದು ಮಂಗಳೂರಿನ ಕೆನರಾ ಕಾಲೇಜು, ಶ್ರೀನಿವಾಸ ಕಾಲೇಜು, ರಾಮಕೃಷ್ಣ ಕಾಲೇಜು ಮೊದಲಾದ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಅರಣ್ಯ ಇಲಾಖೆಗೆ ಪತ್ರದ ಮೂಲಕ ತಮ್ಮ ಆಕ್ರೋಶಗಳನ್ನು, ಪರಿಸರ ಪ್ರೀತಿಯನ್ನು ರವಾನಿದ್ದಾರೆ.
ಉಡುಪಿ X ಪ್ರೆಸ್ ಪರಿಸರ ಕಾಳಜಿ:
ಕರಾವಳಿಯ ಸುದ್ದಿ ಜಾಲತಾಣ ಉಡುಪಿ X ಪ್ರೆಸ್, ಕೂಡ ಮರಗಳ ಮಾರಣಹೋಮವಾಗಲಿರುವ ಈ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದೆ. ಅಮೂಲ್ಯ ಕಾಡು ಕಡಿದು ಜೀವ ಸಂಕುಲಕ್ಕೆ ಕೊಳ್ಳಿ ಇಡುವ ಇಂತಹ ಯೋಜನೆಗಳನ್ನು ನೋಡಿ ತೆಪ್ಪಗಿದ್ದರೆ ನಾಳೆ ನಮ್ಮ ಪರಿಸ್ಥಿತಿಯೂ ಭೀಕರವಾಗಲಿದೆ.
ಪರಿಸರ ವಿರೋಧಿ ಯೋಜನೆಗೆ ನಿಮ್ಮ ವಿರೋಧವೂ ಇರಲಿ:
ಜೀವಸಂಕುಲಕ್ಕೆ, ಅಪಾರ ವೃಕ್ಷ ಸಮೂಹಕ್ಕೆ ಮಾರಕವಾಗಲಿರುವ ಈ ಯೋಜನೆಯನ್ನು ನೀವೂ ವಿರೋಧಿಸಿ, ಮರಗಳನ್ನು ಕಡಿದು ಅಗಲೀಕರಣವಾಗಬೇಕಿಲ್ಲ. ಪರಿಸರವನ್ನು ಉಳಿಸಿಯೇ ಅಭಿವೃದ್ದಿ ಮಾಡಬಹುದು ಎನ್ನುವುದನ್ನು ಸರಕಾರಕ್ಕೆ ತಿಳಿಸೋಣ
ನೀವೇನು ಮಾಡಬೇಕು?
ಅರಣ್ಯ ಇಲಾಖೆಗೆ ಪತ್ರ ಬರೆದು ಮರಗಳನ್ನು ಉಳಿಸುವಲ್ಲಿ ಸಹಕರಿಸಿ. ಪತ್ರದ ಪ್ರತಿಯನ್ನು ಇಲ್ಲಿ ನೀಡಲಾಗಿದೆ. ಅದೇ ಪತ್ರಕ್ಕೆ ಈ ಯೋಜನೆ ವಿರೋಧಿಸುವವರ ಸಹಿಗಳನ್ನು ಪಡೆದುಕೊಂಡು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.
ಶಿವಮೊಗ್ಗ ವಿಭಾಗ.
ಶಿವಮೊಗ್ಗ – 577201
ಅಥವಾ
Mr T K Ramesh Shetty , Krishnaiah Shetty Fuel station , Baalebailu , Thirthalli – 577432, Mobile :9448154319 / 9113232422 ,
ನಮ್ಮ ಪತ್ರದಿಂದ ಸರಕಾರ, ಇಲಾಖೆ ಎಚ್ಚೆತ್ತುಗೊಳ್ಳಲಿ.