ಸರಕಾರವು ಸೂಕ್ತ ಮಾರುಕಟ್ಟೆ ದರ ನಿಗದಿಪಡಿಸಿದರೆ ಕೃಷಿ ಲಾಭದಾಯಕವಾಗಲು ಸಾಧ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಅವರು ಹಿರಿಯಡ್ಕ ಶ್ರೀವೀರಭದ್ರ ದೇವಸ್ಥಾನದ ಆವರಣದಲ್ಲಿ ನಡೆದ ಕೃಷಿ ಮೇಳದ ಸಮಾರೋಪದಲ್ಲಿ ಮಾತನಾಡಿದರು.
ಕೃಷಿ ಉತ್ಪನ್ನಗಳಿಗೆ ನಿಶ್ಚಿತ ದರ ಸಿಕ್ಕರೆ ರೈತರು ಸಾಲದ ಮೊರೆ ಹೋಗುವುದು ತಪ್ಪಲಿದೆ. ವಿದೇಶದಿಂದ ಭಾರತಕ್ಕೆ ಅಡಕೆ ಕಳ್ಳಸಾಗಣೆ ನಿಯಂತ್ರಣ, ತೆಂಗಿನ ದರ ಕುಸಿತಕ್ಕೆ ಕಾರಣಗಳ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾವಯವ ಕೃಷಿಗೆ ರೈತರು ಆದ್ಯತೆ ಕೊಡಬೇಕು ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಕೃಷಿ ಮೇಳದ ಯಶಸ್ಸಿಗೆ ಸಹಕರಿಸಿದ ಪ್ರವೀಣ್ ಶೆಟ್ಟಿ, ಡಾ.ಸುಧೀರ್ ಕಾಮತ್, ಡಾ.ಬಿ.ಧನಂಜಯ್, ರಾಕೇಶ್ ಅವರನ್ನು ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಸಿಇಒ ರಮೇಶ್ ನಾಯಕ್, ಕುಂಬಾರರ ಗುಡಿ ಕೈಗಾರಿಕಾ ಸಂಘದ ಸಂತೋಷ್ ಕುಲಾಲ್ ಪಕ್ಕಾಲ್, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ರಾಜಾರಾಂ ಹೆಗ್ಡೆ ಉಪಸ್ಥಿತರಿದ್ದರು.












