ಆಗ ಪೇಸಿಎಂ; ಈಗ ಸೇಸಿಎಂ: ಸರಕಾರದ ವಿರುದ್ದ ಕಾಂಗ್ರೆಸ್ ನಿಂದ ಮತ್ತೊಂದು ಅಸ್ತ್ರ

ಬೆಂಗಳೂರು: ‘ಪೇಸಿಎಂ’ ಅಭಿಯಾನದ ನಂತರ, ಕಾಂಗ್ರೆಸ್‌ನ ಕರ್ನಾಟಕ ಘಟಕವು ಪ್ರತಿಪಕ್ಷಗಳು ಕೇಳಿದ 50 ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳಿಂದ ಉತ್ತರವನ್ನು ಕೋರಿ ‘ಸೇಸಿಎಂ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯೂಆರ್ ಕೋಡ್ ಸ್ವರೂಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಛಾಯಾಚಿತ್ರದೊಂದಿಗೆ ಪೇಸಿಎಂ ಅಭಿಯಾನದ ಅದೇ ಗ್ರಾಫಿಕ್ ಅನ್ನು ಪ್ರಚಾರಕ್ಕೆ ಬಳಸಲಾಗಿದೆ.

“ಸೇಸಿಎಂ 90% ಈಡೇರಿಸಲಾಗಿಲ್ಲ”, “ಸಿಎಂ ಮಾತನಾಡಲು ನಾವು ಪೇಸಿಎಂ ಮಾಡಬೇಕೇ” ಎಂದು ಪ್ರಶ್ನಿಸಲಾಗಿದೆ.

Image
ಕೃಪೆ: ಟ್ವಿಟರ್

ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳಲ್ಲಿ ಶೇ 10 ರಷ್ಟನ್ನು ಕೂಡಾ ಈಡೇರಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಉಲ್ಲೇಖಿಸಿ ‘90% ಈಡೇರಿಸಲಾಗಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.

“ನಾವು ಸರ್ಕಾರದ ಚುನಾವಣಾ ಭರವಸೆಯ ಮೇಲೆ 50 ಪ್ರಶ್ನೆಗಳನ್ನು ಕೇಳಿದ್ದೇವೆ. ಬಿಜೆಪಿ ಕರ್ನಾಟಕ ನೀಡಿದ ಉತ್ತರಗಳ ಸಂಖ್ಯೆ ಶೂನ್ಯ. ಬಿಜೆಪಿ ತನ್ನ ಸ್ವಂತ ಪ್ರಣಾಳಿಕೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.