ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್‌ನ ಎಫ್‌ಎಂಸಿಜಿ ವಿಭಾಗದ ಸಂಸ್ಥೆಯಾಗಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ಇದೀಗ ಭಾರತದ ಐಸ್‌ಕ್ರೀಂ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿದೆ. ಸಂಸ್ಥೆಯ ಹೊಸ ಐಸ್‌ಕ್ರೀಂ ಬ್ರ್ಯಾಂಡ್ ಬಾಂಬೆ ಕ್ರೀಮರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ವಿಶ್ವದರ್ಜೆಯ ಗುಣಮಟ್ಟ, ಕೈಗೆಟುಕುವ ಬೆಲೆ ಎಂಬ ಉದ್ದೇಶದೊಂದಿಗೆ ಬಾಂಬೆ ಕ್ರೀಮರಿ ಬ್ರ್ಯಾಂಡ್ ಅನ್ನು ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಕೃತಕ ಉತ್ಪನ್ನಗಳ ನಡುವೆ, ನೈಜ ಹಾಲಿನ ಕೆನೆಯಿಂದ ತಯಾರಿಸಿದ ಗುಣಮಟ್ಟದ ಐಸ್‌ಕ್ರೀಂ ಅನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದು ಕಂಪನಿಯ ಪ್ರಮುಖ ಗುರಿಯಾಗಿದೆ.
ಅತ್ಯುತ್ತಮ ಡೇರಿ ಪದಾರ್ಥಗಳನ್ನು ಬಳಸಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ಪನ್ನಗಳನ್ನು ತಯಾರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದರೊಂದಿಗೆ ಭಾರತದಲ್ಲಿ ಕೈಗೆಟುಕುವ ಬೆಲೆಯ ಪ್ರೀಮಿಯಂ ಡೈರಿ ಐಸ್‌ಕ್ರೀಂ ಬ್ರ್ಯಾಂಡ್ ಆಗಿ ಬಾಂಬೆ ಕ್ರೀಮರಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.
ಬಾಂಬೆ ಕ್ರೀಮರಿ ಅಡಿಯಲ್ಲಿ ಗ್ರಾಹಕರಿಗಾಗಿ ವಿವಿಧ ರೀತಿಯ ಐಸ್‌ಕ್ರೀಂ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಕೋನ್‌ಗಳು, ಕಪ್‌ಗಳು, ಟಬ್‌ಗಳು, ಬಾರ್‌ಗಳು ಹಾಗೂ ಸ್ಟಿಕ್‌ಗಳು ಸೇರಿದಂತೆ ಹಲವು ಆಯ್ಕೆಗಳು ಲಭ್ಯವಿರಲಿವೆ.
ಇನ್ನು ವಿಶೇಷವೆಂದರೆ, ಬಾಂಬೆ ಕ್ರೀಮರಿ ಐಸ್‌ಕ್ರೀಂ ಬೆಲೆ ಕೇವಲ ₹10ರಿಂದ ಆರಂಭವಾಗಲಿದೆ. ಹೀಗಾಗಿ ಕೈಗೆಟುಕುವ ದರದಲ್ಲಿ ಪ್ರೀಮಿಯಂ ಗುಣಮಟ್ಟದ ಐಸ್‌ಕ್ರೀಂ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆ ಹುಟ್ಟುಹಾಕಲು ರಿಲಯನ್ಸ್ ಮುಂದಾಗಿದೆ.















