ಕೊಡಗು: ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ

ಕೊಡಗು: ಭಾನುವಾರ ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ ವಕೀಲ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ ಆರ್ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ರೈ, ಹಾಗೂ ನಾರಾಯಣ್ ರೈ ಯವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ವಿರಾಜಪೇಟೆಯ ಶಬರೀಶ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಗಿದೆ. ಸಭೆಯಲ್ಲಿ ನೂತನ ಆಡಳಿತ ಮಂಡಳಿ ಹಾಗೂ 5 ತಾಲೂಕುಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.

ವಿರಾಜಪೇಟೆ ಹಾಗೂ ಕೊಡಗು ಜಿಲ್ಲೆಯ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ವ್ಯಾಜ್ಯಗಳಿಗೆ ವಕಾಲತು ವಹಿಸಿಕೊಂಡಿರುವ ವಕೀಲ ಎಂಬ ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಭಾಜನರಾದ ಬಿ ರತ್ನಾಕರ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿವಿರಾಜಪೇಟೆ ತಾಲೂಕು ತುಳುವೆರೆನ ಜನಪದ ಕೂಟದ ವತಿಯಿಂದ ಸರಳವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಬಿ. ಎಂ. ಗಣೇಶ್, ಶ್ರೀಮತಿ ದಿವ್ಯ, ಭರತ್ ರೈ , ವಿನೋದ್ ಪೂಜಾರಿ, ಶ್ರೀಮತಿ ಬಿ .ಜಿ .ಅನಿತಾ, ಶರತ್ ರೈ, ಗಣೇಶ್ ಪೆರಂಬಾಡಿ, ತಾಲೂಕು ಅಧ್ಯಕ್ಷ ಕೆ. ಸಿ ಶಬರೀಶ್ ಶೆಟ್ಟಿ ಉಪಸ್ಥಿತರಿದ್ದರು.