ಉನ್ನತ ಬೌದ್ಧಿಕ ಆಸ್ತಿ ಹಕ್ಕುಗಳು- ತರಬೇತಿ ಕಾರ್ಯಾಗಾರ


ಮಂಗಳೂರು:  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ “ಉನ್ನತ ಬೌದ್ಧಿಕ ಆಸ್ತಿ ಹಕ್ಕುಗಳು” (Advanced Intellectual Property Rights (IPR)) ವಿಷಯದ ಮೇಲೆ ಜೂನ್ 16 ರಿಂದ ಜೂನ್ 20 ರವರೆಗೆ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಬೆಂಗಳೂರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.


ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಉಪನ್ಯಾಸಗಳನ್ನು ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ ಪ್ರಾಧ್ಯಾಪಕರು, ವಿಜ್ಞಾನಾಸಕ್ತರು ಹಾಗೂ ಕೈಗಾರಿಕೋದ್ಯಮದ ಪ್ರತಿನಿಧಿಗಳು ಭಾಗವಹಿಸಬಹುದು.
ಆಸಕ್ತರು ಜೂನ್ 12 ರೊಳಗೆ ಲಿಂಕ್ https://forms.gle/iwHJD5CxnccCfw4u5 ಮೂಲಕ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಕಾರ್ಯಾಗಾರದ ಸಂಯೋಜಕ ವಿ. ಜಿ. ಉಮೇಶ ವೈಜ್ಞಾನಿಕಾಧಿಕಾರಿ (ಮೊ: 9743084194) ಸಂಪರ್ಕಿಸಬಹುದು ಅಥವಾ ಅಕಾಡೆಮಿಯ ವೆಬ್‍ಸೈಟ್ https://kstacademy.in ವೀಕ್ಷಿಸಬಹುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.