ಮಣಿಪಾಲ: ಭಾರತ ಸರಕಾರದ ಪ್ರತಿನಿಧಿಯಾದ ಭಾರತ್ ಸೇವಕ್ ಸಮಾಜ್ ಇದರ ಆಶ್ರಯದಲ್ಲಿ ನಡೆಸಲ್ಪಡುವ ಮಣಿಪಾಲದ ‘ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ 1 ವರ್ಷದ ಡಿಪ್ಲೊಮಾ ಇನ್ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸಿಗೆ ಪಿಯುಸಿ, ಡಿಗ್ರಿ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತದೆ. ತರಬೇತಿ ಮುಗಿಸಿದ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಪ್ರತಿಷ್ಠಿತ ಹಾಗೂ ಹೆಸರುವಾಸಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಹೊಂದುವ ಮೂಲಕ ಭವಿಷ್ಯ ರೂಪಿಸಿಕೊಂಡಿದ್ದಾರೆ.
2021-22 ಬ್ಯಾಚಿನಲ್ಲಿ 95 % ರಷ್ಟು ಉದ್ಯೋಗ ಕಲ್ಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. 2022-23 ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ.
ಆಸಕ್ತರು, ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆಗೆ ಶ್ರೀ ಶಾರದ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಗೆ ಭೇಟಿ ನೀಡುವಂತೆ ಅಥವಾ ದೂ.ಸಂಖ್ಯೆ – 9901722527ಗೆ ಕರೆ ಮಾಡುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿರುತ್ತದೆ.












