ಕಾರ್ಕಳ ಕ್ರೈಸ್ಟ್‍ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಲಾಂಗ್‍ಟರ್ಮ್ ನೀಟ್ ಎರಡನೇ ಬ್ಯಾಚ್ ದಾಖಲಾತಿ ಆರಂಭ; ವಸತಿ, ಊಟ, ಕೋಚಿಂಗ್ ಸಂಪೂರ್ಣ ಉಚಿತ

ಕಾರ್ಕಳ: ಇಲ್ಲಿನ ಕ್ರೈಸ್ಟ್‍ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಲಾಂಗ್‍ಟರ್ಮ್ ನೀಟ್‍ನ ಎರಡನೇ ಬ್ಯಾಚ್‍ಗೆ ದಾಖಲಾತಿ ಆರಂಭಗೊಂಡಿದೆ.

ಈ ತರಬೇತಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿರಲಿದೆ. ಯಾವೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಯೂ ಆರ್ಥಿಕ ಸಮಸ್ಯೆಯಿಂದಾಗಿ ನೀಟ್ ತರಬೇತಿಯಿಂದ ವಂಚಿತರಾಗಬಾರದುಎಂಬುದು ಇದರ ಉದ್ದೇಶವಾಗಿದೆ.

ಈಗಾಗಲೇ ದ್ವಿತೀಯ ಪಿಯುಸಿ (ಪಿಸಿಎಂಬಿ) ಮುಗಿಸಿ ವೈದ್ಯರಾಗಬೇಕೆಂದು ಕನಸು ಕಾಣುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅಪೂರ್ವ ಅವಕಾಶ ಸಿಗಲಿದೆ.

ಸೀಮಿತ ವಿದ್ಯಾರ್ಥಿಗಳ ವಿಶೇಷ ಎರಡನೇ ನೀಟ್ ಬ್ಯಾಚ್ ಇದಾಗಿದ್ದು ಸೇರಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಹಾಗೂ ಊಟದ ಸೌಲಭ್ಯ ಲಭ್ಯವಿದ್ದು ಜೊತೆಗೆ ಕೋಚಿಂಗ್ ಹಾಗೂ ಅಧ್ಯಯನ ಸಾಮಾಗ್ರಿಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ.

ಆಸಕ್ತರು ಈ ಕೂಡಲೇ ದೂರವಾಣಿ ಸಂಖ್ಯೆ 7204543688/ 9611474571 ಅಥವಾ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.