ಉಡುಪಿ: ಗುಣಮಟ್ಟದ ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿರುವ ಉಡುಪಿಯ ನಿಟ್ಟೂರಿನ ಜ್ಞಾನಕಾಶಿ ಕ್ಯಾಂಪಸ್ನ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ನಲ್ಲಿ (LIRS) 2027-28ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ವಿಶಾಲವಾದ ಹಸಿರು ಪರಿಸರದಲ್ಲಿ ನೆಲೆಗೊಂಡಿರುವ ಶಾಲೆಯು ಮಕ್ಕಳಿಗೆ ಸುರಕ್ಷಿತ, ಆಹ್ಲಾದಕರ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುತ್ತಿದೆ.
ಶ್ರೀ ಭುವನೇಂದ್ರ ಕಿದಿಯೂರು ಅವರ ದೂರದೃಷ್ಟಿಯ ಆಶಯದಂತೆ ಸ್ಥಾಪನೆಯಾದ ಈ ಸಂಸ್ಥೆಯು ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಹಾಗೂ ಸುಶಿಕ್ಷಿತ ಸಮಾಜವೇ ಪ್ರಗತಿಯ ಬುನಾದಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ನರ್ಸರಿ ಶಿಕ್ಷಣ ಉಚಿತ:
2027-28ನೇ ಸಾಲಿನಲ್ಲಿ ನರ್ಸರಿ ತರಗತಿಗೆ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಟ ಮತ್ತು ಚಟುವಟಿಕೆ ಆಧಾರಿತ ಕಲಿಕೆ, ವೈಯಕ್ತಿಕ ಗಮನ, ಅನುಭವಿ ಶಿಕ್ಷಕರ ಮಾರ್ಗದರ್ಶನ, ಸೃಜನಶೀಲ ಚಟುವಟಿಕೆಗಳು ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.
ಅಂತರರಾಷ್ಟ್ರೀಯ ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ.
ಆಧುನಿಕ ಸೌಲಭ್ಯಗಳೊಂದಿಗೆ ಸಮಗ್ರ ಶಿಕ್ಷಣ:
ಅರ್ಹ ಮತ್ತು ಅನುಭವಿ ಶಿಕ್ಷಕರ ತಂಡ, ಆಧುನಿಕ ತರಗತಿ ಕೊಠಡಿಗಳು ಹಾಗೂ ಸುಸಜ್ಜಿತ ವಿಜ್ಞಾನ, STEM, ಗಣಿತ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು ಶಾಲೆಯ ಪ್ರಮುಖ ಆಕರ್ಷಣೆಗಳಾಗಿವೆ. ವಸತಿ ಸೌಲಭ್ಯವಿದ್ದು, ಮನೆಯ ವಾತಾವರಣವನ್ನು ನೆನಪಿಸುವ ರೀತಿಯಲ್ಲಿ ಪೌಷ್ಟಿಕ ಆಹಾರ ಮತ್ತು ಆರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ ಭಗವದ್ಗೀತೆ ಬೋಧನೆ ಹಾಗೂ ಶ್ಲೋಕ ಪಠಣ ನಡೆಯುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸಕ್ಕೂ ಅವಕಾಶವಿದೆ.
ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿಶೇಷ ಗಮನ ಹರಿಸಲಾಗಿದ್ದು, ಕರಾಟೆ, ಚೆಸ್, ಬಿಲ್ಲುಗಾರಿಕೆ, ಮಾಸ್ಟರ್ ಚೆಫ್ ಅಡುಗೆ ತರಬೇತಿ, ತಬಲಾ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಸ್ಕೇಟಿಂಗ್ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಸಂಪರ್ಕಿಸಿ:ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್, ಜ್ಞಾನಕಾಶಿ ಕ್ಯಾಂಪಸ್, ಎನ್ಎಚ್ 66, ನಿಟ್ಟೂರು, ಪುತ್ತೂರು ಅಂಚೆ, ಉಡುಪಿಮೊ- 77956 48501, 73382 85811, 77956 48500. ವೆಬ್ಸೈಟ್: www.lordsedu.in















