ಬಿ.ಕಾಂ ಜೊತೆಗೆ ಸಿ.ಎ ಮತ್ತು ಸಿ.ಎಸ್ – ಬಹು ಬೇಡಿಕೆಯ ಕೋರ್ಸ್
ವಾಣಿಜ್ಯ ಕ್ಷೇತ್ರದಲ್ಲಿ, ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಮತ್ತು ಕಂಪನಿ ಸೆಕ್ರೆಟರಿ (ಸಿಎಸ್) ನಂತಹ ವೃತ್ತಿಪರ ಕೋರ್ಸ್ ಗಳು ಅತ್ಯಂತ ಪ್ರಭಾವಿ ಹಾಗೂ ಬಹು ಬೇಡಿಕೆಯ ಕೋರ್ಸ್ ಗಳಾಗಿದೆ ಮತ್ತು ಇದಕ್ಕೆ ಪ್ರಪಂಚದಾದ್ಯಂತ ಮಾನ್ಯತೆ ದೊರಕಿದೆ. ಭಾರತದಲ್ಲಿ ಸಿ.ಎ ಮತ್ತು ಸಿ.ಎಸ್ ಕೋರ್ಸ್ ನೊಂದಿಗೆ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಪದವಿಯ ಸಂಯೋಜನೆಯು ಪ್ರಬಲವಾದ ಆಯ್ಕೆಯಾಗಿ ಹೊರಹೊಮ್ಮಿದೆ.
ಸಿ.ಎ ಮತ್ತು ಸಿ.ಎಸ್ ಎಂದರೇನು ?
ಚಾರ್ಟರ್ಡ್ ಅಕೌಂಟೆನ್ಸಿ ಎನ್ನುವುದು ಪ್ರತಿಷ್ಠಿತ ಲೆಕ್ಕಪರಿಶೋಧಕ ಹುದ್ದೆಯಾಗಿದ್ದು, ಇದನ್ನು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐ.ಸಿ.ಎ.ಐ.) ನೀಡುತ್ತಿದೆ. ಲೆಕ್ಕಪತ್ರ ನಿರ್ವಹಣೆ, ತೆರಿಗೆ, ಲೆಕ್ಕಪರಿಶೋಧನೆ ಮತ್ತು ಹಣಕಾಸು ನಿರ್ವಹಣೆಯಲ್ಲಿ ಪರಿಣತಿಯನ್ನು ಹೊಂದಿದ್ದು ಸಿ.ಎ ಫೌಂಡೇಶನ್, ಇಂಟರ್ಮೀಡಿಯೇಟ್ ಹಾಗೂ ವೃತ್ತಿಪರ ಸಿ.ಎ ಅಡಿಯಲ್ಲಿ ಎರಡು ವರ್ಷದ ಆರ್ಟಿಕಲ್ ಶಿಪ್ ಹಾಗೂ ಫೈನಲ್ ಎನ್ನುವ ಹಂತಗಳನ್ನು ಒಳಗೊಂಡಿದೆ.
ಕಂಪನಿ ಸೆಕ್ರೆಟರಿ ಎಂಬುದು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐ.ಸಿ.ಎಸ್.ಐ) ನೀಡುವ ಕೋರ್ಸ್ ಆಗಿದೆ. ಕಂಪನಿ ಆಡಳಿತ, ಕಾನೂನು ಅನುಸರಣೆ, ಕಾರ್ಪೊರೇಟ್ ಕಾನೂನುಗಳು ಮೇಲೆ ಈ ಕೋರ್ಸ್ ಕೇಂದ್ರೀಕರಿಸಿದ್ದು ಸಿ.ಎಸ್.ಇ .ಇ .ಟಿ , ಎಕ್ಸಿಕ್ಯೂಟಿವ್ ಮತ್ತು ವೃತ್ತಿಪರ ಸಿ.ಎಸ್ ಅಡಿಯಲ್ಲಿ ಇಪ್ಪತ್ತೊಂದು ತಿಂಗಳ ಆರ್ಟಿಕಲ್ ಶಿಪ್ ಮುಗಿಸಿ ಪ್ರೊಫೆಷನಲ್ ಎನ್ನುವ ಹಂತಗಳನ್ನು ಹೊಂದಿದೆ.
ಬಿ.ಕಾಂ ಜೊತೆಗೆ ಸಿ.ಎ ಮತ್ತು ಸಿ.ಎಸ್ ಮಾಡುವುದರ ಮಹತ್ವ :
ಬಿ.ಕಾಂ ಜೊತೆಗೆ ಸಿ.ಎ ಮತ್ತು ಸಿ.ಎಸ್ ತರಬೇತಿಯನ್ನು ಸಂಯೋಜಿಸುವುದು ವೃತ್ತಿಜೀವನದ ಅವಕಾಶಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ವಾಣಿಜ್ಯ, ಹಣಕಾಸು, ಲೆಕ್ಕಪತ್ರ ನಿರ್ವಹಣೆ ಮತ್ತು ವ್ಯಾಪಾರದ ಕಾನೂನು ಅಂಶಗಳಲ್ಲಿ ಬಲವಾದ ಅಡಿಪಾಯವನ್ನು ಒದಗಿಸುತ್ತದೆ. ಈ ಸಮಗ್ರ ಜ್ಞಾನವು ಕಾರ್ಪೊರೇಟ್ ವಲಯದಲ್ಲಿ ಹೆಚ್ಚು ಮೌಲ್ಯಯುತವಾಗಿದೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ.
ಬಿ.ಕಾಂನೊಂದಿಗೆ ಸಿಎ ಮತ್ತು ಸಿಎಸ್ ಏಕೆ ಅವಶ್ಯಕ ?
ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಿ.ಕಾಂನೊಂದಿಗೆ ಸಿಎ ಮತ್ತು ಸಿಎಸ್ ಮಾಡುವುದರಿಂದ ವಾಣಿಜ್ಯ, ಹಣಕಾಸು, ಲೆಕ್ಕಪತ್ರ ನಿರ್ವಹಣೆ ಮತ್ತು ವ್ಯವಹಾರದ ಕಾನೂನು ಅಂಶಗಳ ಸಮಗ್ರ ತಿಳುವಳಿಕೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ ಮತ್ತು ಕಾರ್ಪೊರೇಟ್ ವಲಯದಲ್ಲಿ ವಿವಿಧ ವ್ಯವಹಾರ ಸವಾಲುಗಳನ್ನು ನಿಭಾಯಿಸುವಲ್ಲಿ ಪ್ರವೀಣರನ್ನಾಗಿ ಮಾಡುತ್ತದೆ. ಅದಲ್ಲದೆ ವಿವಿಧ ವೃತ್ತಿ ಅವಕಾಶಗಳನ್ನು ತೆರೆದಿಡುತ್ತದೆ ಜೊತೆಗೆ ಪದವಿಧರರಿಗೆ ಬ್ಯಾಂಕಿಂಗ್ , ಹಣಕಾಸು ಸಲಹೆ ಮತ್ತು ಕಾರ್ಪೊರೇಟ್ ಗಳಂತಹ ವೈವಿಧ್ಯಮಯ ವಲಯಗಳಲ್ಲಿ ಕೆಲಸ ಮಾಡುವ ಆಯ್ಕೆಯೂ ಅವರಿಗೆ ಇದೆ.
ಬಿ.ಕಾಂನೊಂದಿಗೆ ಸಿಎ ಮತ್ತು ಸಿಎಸ್ ಮಾಡುವುದು ಈಗಿನ ಪ್ರಪಂಚದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದ್ದರೂ ವಿದ್ಯಾರ್ಥಿಗಳು ನಿಜವಾಗಿಯೂ ಸವಾಲನ್ನು ಎದುರಿಸುವುದು ಎರಡು ಕೋರ್ಸ್ ಗಳನ್ನೂ ಏಕಕಾಲದಲ್ಲಿ ನಿಭಾಯಿಸುವುದರ ಬಗ್ಗೆ. ವೃತ್ತಿಪರ ತರಬೇತಿಗಳಿಗೆ ಹೆಸರಾದ ಹಾಗೂ ‘ಕರಾವಳಿ ಕರ್ನಾಟಕದಲ್ಲಿ ಅತಿ ಹೆಚ್ಚು ಸಿ.ಎ, ಸಿ.ಎಸ್. ಗಳನ್ನು ಸಮಾಜಕ್ಕೆ ನೀಡುತ್ತಿರುವ ಹೆಮ್ಮೆಯ ಸಂಸ್ಥೆ’ಯಾದ ತ್ರಿಶಾ ಸಂಸ್ಥೆಯು ಬಿ.ಕಾಂ ಪದವಿ ಮತ್ತು ಸಿ.ಎ ಮತ್ತು ಸಿ.ಎಸ್ ಕೋರ್ಸ್ ಗಳನ್ನ ಏಕಕಾಲದಲ್ಲಿ ನಿಭಾಯಿಸುವ ವಿದ್ಯಾರ್ಥಿಸ್ನೇಹಿ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡು ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಹಾಗೂ ಮಂಗಳೂರಿನ ಅಳಕೆಯಲ್ಲಿ ತ್ರಿಶಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಎರಡೂ ಕೋರ್ಸ್ ಗಳನ್ನು ನಿಭಾಯಿಸಿ, ಸುಗಮವಾಗಿಸಿ ಸಮಾಜಕ್ಕೆ ಉತ್ತಮ ವೃತ್ತಿಪರರನ್ನು ಕೊಡುವುದು ಸಂಸ್ಥೆಯ ಗುರಿಯಾಗಿದೆ. ಕಳೆದ ಬಾರಿಯ ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ಸಿ.ಎ ಫೌಂಡೇಶನ್ ನಲ್ಲಿ ಶೇ.62.03 (157/252) ಹಾಗೂ ಸಿ.ಎ ಇಂಟರ್ ಮೀಡಿಯೆಟ್ ನಲ್ಲಿ ಶೇ.55.60 (129/232) ಫಲಿತಾಂಶ ಪಡೆದುಕೊಂಡಿರುವುದು ಸಂಸ್ಥೆಯ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ವಿಭಿನ್ನ ರೀತಿಯ ಕೊಡುಗೆಗಳನ್ನು ಭವಿಷ್ಯದಲ್ಲಿ ಸಮಾಜಕ್ಕೆ ನೀಡುವುದರಲ್ಲಿ ಸಂಸ್ಥೆ ಸದಾ ಶ್ರಮಿಸುತ್ತಿದೆ.
“ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಅನೇಕ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರನ್ನು ಮೊದಲ ಆಯ್ಕೆಯಾಗಿ ಇರಿಸಿಕೊಳ್ಳುತ್ತಾರೆ ಎನ್ನುವುದನ್ನು ಮರೆಯಬಾರದು. ಆ ನಿಟ್ಟಿನಲ್ಲಿ ಇಂತಹ ಸಂಯೋಜನೆಯ ಕೋರ್ಸ್ ಗಳು ವಿದ್ಯಾರ್ಥಿಗಳ ಪ್ರತಿಷ್ಠೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚಿನ ವಿಶೇಷ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ವೃತ್ತಿ ಆಯ್ಕೆಗಳಲ್ಲಿ ಬಹಳಷ್ಟು ಅವಕಾಶಗಳನ್ನು ತೆರೆದಿಡುತ್ತದೆ ಎನ್ನುವುದೂ ಗಮನಾರ್ಹ” -ಸಿ.ಎ ಗೋಪಾಲಕೃಷ್ಣ ಭಟ್
ಅಧ್ಯಕ್ಷರು, ತ್ರಿಶಾ ಸಮೂಹ ಸಂಸ್ಥೆಗಳು.
ಆಸಕ್ತ ವಿದ್ಯಾರ್ಥಿಗಳು ಬಿ.ಕಾಂ ಪದವಿಯ ಜೊತೆಗೆ ಸಿ.ಎ, ಸಿ.ಎಸ್ ಕೋರ್ಸ್ ಗಳ ತರಗತಿಗೆ ನೋಂದಾವಣಿ ಅಥವಾ ವಿಚಾರಣೆಯನ್ನು ಕಟಪಾಡಿ ಮಟ್ಟು ರಸ್ತೆಯಲ್ಲಿರುವ ತ್ರಿಶಾ ವಿದ್ಯಾ ಕಾಲೇಜನ್ನು ಅಥವಾ ಮಂಗಳೂರಿನ ಅಳಕೆಯಲ್ಲಿರುವ ತ್ರಿಶಾ ಕಾಲೇಜನ್ನು ಸಂಪರ್ಕಿಸಬಹುದು ಅಥವಾ 9738529738 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.