ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಪ್ರವೇಶಾತಿ ಆರಂಭ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಮೂರು ನೂತನ ಮಾದರಿಯ ಪದವಿ ಮತ್ತು ಸ್ನಾತಕ್ಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿ ಪ್ರಾರಂಭವಾಗಿದೆ ಮತ್ತು ಈ ತಿಂಗಳ ಅಂತ್ಯದವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮೂರು ನೂತನ ಕಾರ್ಯಕ್ರಮಗಳಾದ – ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್) , ಎಂಎ (ಆರ್ಟ್ ಅಂಡ್ ಪೀಸ್
ಸ್ಟಡೀಸ್), ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) – ಅಪಾರವಾದ ಸಮಕಾಲೀನ ಪ್ರಾಮುಖ್ಯತೆಯೊಂದಿಗೆ, ವಿವಿಧ ಕಲಿಕಾ ವಿಷಯಗಳ ಮೇಲೆ ಕೇಂದ್ರಿತವಾಗಿದೆ.

ಎರಡು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ, ಪರಿಸರ ಅಧ್ಯಯನವು ಒಂದನ್ನು ವ್ಯಾಖ್ಯಾನಿಸಿದರೆ, ಶಾಂತಿ ಅಧ್ಯಯನವು ಇನ್ನೊಂದನ್ನು ವ್ಯಾಖ್ಯಾನಿಸುತ್ತದೆ. ಕಲೆ ಮತ್ತು ಸೌಂದರ್ಯಶಾಸ್ತ್ರವು ಎರಡೂ ಸ್ನಾತಕ್ಕೋತ್ತರ ಕಾರ್ಯಕ್ರಮಗಳಲ್ಲೂ ಸಾಮಾನ್ಯವಾಗಿದೆ. ಪದವಿ ಕಾರ್ಯಕ್ರಮವು, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಅಧ್ಯಯನಗಳೆರಡನ್ನೂ ಒಳಗೊಂಡು ಕಲಿಕೆಯ ವಿಶಾಲ ಚೌಕಟ್ಟನ್ನು ರೂಪಿಸುತ್ತದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಮಾಧ್ಯಮವು ಪ್ರಮುಖ ಅಂಶವಾಗಿದೆ. “ಒಟ್ಟಾರೆಯಾಗಿ ಹೇಳುವುದಾದರೆ ಇದು ಕಲಾ ಮಾಧ್ಯಮ, ಮಾಧ್ಯಮಕ್ಕಾಗಿ ಕಲೆ ಮತ್ತು ಶಾಂತಿಗಾಗಿ ಕಲೆ” ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಹೇಳಿದರು.

ಕೋವಿಡ್ ಬಾಧಿತವಾದ ಕಳೆದ ಮೂರು ವರ್ಷಗಳಲ್ಲಿಯೂ ಶೈಕ್ಷಣಿಕ ಚಟುವಟಿಕೆಗಳು, ಕ್ಷೇತ್ರ ವೀಕ್ಷಣೆ, ಗೋಷ್ಠಿಗಳು, ವಿಚಾರ ಸಂಕೀರ್ಣಗಳು ಮತ್ತು ಉದ್ಯೋಗ ಮೇಳಗಳ ನಿಯೋಜನೆಯ ಜೊತೆಗೆ ಪದವಿ ಮತ್ತು ಸ್ನಾತಕ್ಕೋತ್ತರ ಕಾರ್ಯಕ್ರಮಗಳು ಗಮನಾರ್ಹವಾದ ಹೆಜ್ಜೆಗಳನ್ನಿಟ್ಟಿದೆ ಎಂದು ಎಂದು ಪ್ರೊ ಹಿರೇಗಂಗೆ ಹೇಳಿದರು.

ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ನಿಂದ ಪಡೆಯಬಹುದು- https://manipal.edu/gandhian-centre.html