ಚಂದ್ರ ಆಯ್ತು ಇದೀಗ ಸೂರ್ಯನತ್ತ ISRO ಚಿತ್ತ: ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಆದಿತ್ಯ-ಎಲ್ 1 ಉಡಾವಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮಹತ್ವಾಕಾಂಕ್ಷೆಯ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಲಿದೆ ಎಂದು ಟ್ವೀಟ್ ಮಾಡಿ ತಿಳಿಸಿದೆ.

ಸೆಪ್ಟೆಂಬರ್ 2, ರಂದು 11:50ಕ್ಕೆ ಶ್ರೀಹರಿಕೋಟಾದಿಂದ ಆದಿತ್ಯ-L1 ಅನ್ನು ಉಡಾವಣೆ ಮಾಡಲಾಗುವುದು. https://lvg.shar.gov.in/VSCREGISTRATION/index.jsp ನೋಂದಾಯಿಸುವ ಮೂಲಕ ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಬಿಡುಗಡೆಯನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದೆ. ನೋಂದಣಿಯ ಪ್ರಾರಂಭವನ್ನು ಪ್ರಕಟಿಸಲಾಗುತ್ತದೆ ಎಂದು ಇಸ್ರೋ ಟ್ವೀಟ್ ತಿಳಿಸಿದೆ.

ಆದಿತ್ಯ-L1 ಇದು ಸೂರ್ಯನನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ ಮತ್ತು ಸೂರ್ಯ-ಭೂಮಿಯ ವ್ಯವಸ್ಥೆಯ L1 ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲು ಯೋಜಿಸಲಾಗಿದೆ. ಸೂರ್ಯನ ಮೇಲಿನ ವಾತಾವರಣದ (ಕ್ರೋಮೋಸ್ಫಿಯರ್ ಮತ್ತು ಕರೋನಾ) ಡೈನಾಮಿಕ್ಸ್ ಅಧ್ಯಯನ, ಕ್ರೋಮೋಸ್ಪಿರಿಕ್ ಮತ್ತು ಕರೋನಲ್ ಹೀಟಿಂಗ್, ಭಾಗಶಃ ಅಯಾನೀಕರಿಸಿದ ಪ್ಲಾಸ್ಮಾದ ಭೌತಶಾಸ್ತ್ರ, ಕರೋನಲ್ ಮಾಸ್ ಎಜೆಕ್ಷನ್‌ಗಳ ಪ್ರಾರಂಭ ಮತ್ತು ಜ್ವಾಲೆಗಳ ಅಧ್ಯಯನ, ಸೂರ್ಯನಿಂದ ಕಣದ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಡೇಟಾವನ್ನು ಒದಗಿಸುವ ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರದ ಅಧ್ಯಯನ ಮುಂತಾದವನ್ನು ಆದಿತ್ಯ-L1ಕೈಗೊಳ್ಳಲಿದೆ.

Image

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಮತ್ತು ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಾಮಿ ಮತ್ತು ಆಸ್ಟ್ರೋಫಿಸಿಕ್ಸ್, ಪುಣೆ ಮಿಷನ್ ನ ಸಹ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಿವೆ.