ಆದಿತ್ಯ ಎಲ್ 1 ನಿಂದ ಬಂತು ಭೂಮಿ ಮತ್ತು ಚಂದ್ರನ ಮೊದಲ ಚಿತ್ರ!!

ಬೆಂಗಳೂರು: ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಶೋಧಕ ಆದಿತ್ಯ-ಎಲ್1 (Aditya L1) ಲಾಗ್ರೇಂಜ್ ಪಾಯಿಂಟ್ 1 ಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಭೂಮಿ ಮತ್ತು ಚಂದ್ರನ ಚಿತ್ರ ಮತ್ತು ತನ್ನ ಸೆಲ್ಫಿ ತೆಗೆದುಕೊಂಡಿದೆ!

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ (ISRO) ಪ್ರಕಾರ, ಆದಿತ್ಯ-L1 ಆನ್‌ಬೋರ್ಡ್‌ನಲ್ಲಿರುವ ಕ್ಯಾಮೆರಾ ತನ್ನ ಅತಿದೊಡ್ಡ ಪೇಲೋಡ್, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಮತ್ತು SUIT ಉಪಕರಣಗಳ ಹಾಗೂ ಭೂಮಿ ಮತ್ತು ಚಂದ್ರನ ಚಿತ್ರವನ್ನು ಸೆಪ್ಟೆಂಬರ್ 4 ರಂದು ಸೆರೆಹಿಡಿದಿದೆ.

L1 ಗೆ ನಾಲ್ಕು ತಿಂಗಳ ಸುದೀರ್ಘ ಪ್ರಯಾಣದ ಎರಡನೇ ದಿನ ಭೂಮಿ ಮತ್ತು ಅದರ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ಚಿತ್ರವನ್ನು ಆದಿತ್ಯ ಎಲ್ 1 ಕ್ಲಿಕ್ ಮಾಡಿದೆ.