ಭಾರತದ ಐತಿಹಾಸಿಕ ಚರಿತ್ರೆ ರಾಮಾಯಣ ಆಧಾರಿತ ಎನ್ನಲಾದ ಆದಿಪುರುಷ್ ಚಿತ್ರವು ದಾಖಲೆ ಬರೆಯಲಿದ್ದು, ಚಿತ್ರದ ರಾಮ್ ಸಿಯಾ ರಾಮ್ ಹಾಡು ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಾದ್ಯಂತ 70+ ಮಾರುಕಟ್ಟೆಗಳನ್ನು ವ್ಯಾಪಿಸಿರುವ ವಿವಿಧ ವೇದಿಕೆಗಳಾದ ಚಲನಚಿತ್ರ ಚಾನೆಲ್ಗಳು, ಜಿಇಸಿ ಗಳು, ರೇಡಿಯೋ ಸ್ಟೇಷನ್, ರಾಷ್ಟ್ರೀಯ ಸುದ್ದಿ ವಾಹಿನಿಗಳು, ಹೊರಾಂಗಣ ಜಾಹೀರಾತು ಫಲಕಗಳು, ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು, ಟಿಕೆಟಿಂಗ್ ಪಾಲುದಾರರು, ಚಲನಚಿತ್ರ ಥಿಯೇಟರ್ಗಳು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಸಚೇತ್ ಪರಂಪರಾ ಅವರು ಹಾಡಿ ಸಂಯೋಜಿಸಿರುವ ಹಾಡನ್ನು ಮನೋಜ್ ಮುಂತಶಿರ್ ಶುಕ್ಲ ಬರೆದಿದ್ದಾರೆ.
ರಾಮನ ಪಾತ್ರದಲ್ಲಿ ಬಾಕ್ಸ್ ಆಫೀಸ್ ನ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಲಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ಚಿತ್ರವನ್ನು ಓಂ ರಾವುತ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಟಿ-ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಹಯೋಗ ನೀಡಿದೆ. ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ನಟಿಸಿದ್ದಾರೆ. ಚಿತ್ರವು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರವು ಜೂನ್ 16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.