ದೇಶಾದ್ಯಂತ ಚಿತ್ರಮಂದಿರಗಳಲ್ಲಿ ನಾಗಾಲೋಟದಿಂದ ಓಡುತ್ತಿರುವ ಕೆ.ಜಿ.ಎಫ್-2 ಚಲನಚಿತ್ರದ ಅಮೋಘ ಯಶಸ್ಸಿನ ಬಳಿಕ ರಾಕ್ ಸ್ಟಾರ್ ಯಶ್ ಇದೀಗ ಮಸ್ತಿ ಮೂಡ್ ನಲ್ಲಿದ್ದಾರೆ. ಚಿತ್ರರಂಗದಲ್ಲಿ ರಾಕಿ ಭಾಯ್ ಎಂದೇ ಗುರುತಿಸಲ್ಪಡುವ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್, ಮಗಳು ಐರಾ ಮತ್ತು ಮಗ ಯಥರ್ವ್ ಜೊತೆ ಗೋವಾದಲ್ಲಿ ಸಮಯ ಕಳೆಯುವ ನಿಟ್ಟಿನಲ್ಲಿ ಗೋವಾದತ್ತ ಮುಖ ಮಾಡಿದ್ದಾರೆ. ಗೋವಾ ವಿಮಾನ ನಿಲ್ದಾಣದಲ್ಲಿ ದಂಪತಿಗಳು ಮತ್ತು ಮಕ್ಕಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಯಶ್ ಮತ್ನಿ ರಾಧಿಕಾ ಪಂಡಿತ್ ರವರ ಅಜ್ಜಿ ಮನೆಯು ಗೋವಾದಲ್ಲಿದ್ದು, ತಮ್ಮ ನಿಶ್ಚಿತಾರ್ಥ, ಮಗನ ಹುಟ್ಟು ಹಬ್ಬವನ್ನೂ ಗೋವಾದಲ್ಲೇ ಮಾಡಿಕೊಂಡಿರುವ ಈ ದಂಪತಿಗಳು ಸಮಯ ಸಿಕ್ಕಾಗಲೆಲ್ಲಾ ಗೋವಾ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಕೆ.ಜಿ.ಎಫ್-2 ಅತ್ಯಂತ ಯಶಸ್ವಿ ಚಲನಚಿತ್ರವೆಂದು ದಾಖಲಾಗಿದ್ದರೂ, ಸ್ಟಾರ್ ಡಮ್ ನ ಹಂಗಿಲ್ಲದೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುವ ಯಶ್, ತಮ್ಮ ಕುಟುಂಬದ ಜೊತೆ ಸಮಯ ಕಳೆಯುವ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.