ತುಳುಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಕಾರು ಅಪಘಾತ

ಶಿರಾಡಿ: ಕನ್ನಡ ಮತ್ತು ತುಳು ಚಿತ್ರರಂಗದ ನಟ, ನಿರ್ದೇಶಕ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಶಿರಾಡಿ ಘಾಟ್ ನಲ್ಲಿ ಅಪಘಾತಕ್ಕೀಡಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ರೂಪೇಶ್ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ವರದಿಯಾಗಿದೆ.

ರೂಪೇಶ್ ಶೆಟ್ಟಿ ಗಿರ್ಗಿಟ್ ತುಳು ಚಿತ್ರ ಮತ್ತು ಕನ್ನಡದಲ್ಲಿ ನಿಶಬ್ಧ 2′, ಡೇಂಜರ್ ಜೋನ್’,`ಪಿಶಾಚಿ 2′ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.