ನಟ ರಣವೀರ್ ಸಿಂಗ್ ಬಾಂದ್ರಾ ಹೊಸ ಮನೆ ಬೆಲೆ ಬರೋಬ್ಬರಿ 119 ಕೋಟಿ ರೂಪಾಯಿ!

ಮುಂಬೈ: ನಟ ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸಾಗರ್ ರೇಶಮ್ ಎಂಬ ಐಷಾರಾಮಿ ವಸತಿ ಟವರ್ ನಲ್ಲಿ ಫ್ಯಾನ್ಸಿ ಸೀ-ವ್ಯೂ ಕ್ವಾಡ್ರಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಐಷಾರಾಮಿ ಕ್ವಾಡ್ರಾಪ್ಲೆಕ್ಸ್ ನ ಬೆಲೆ ಸರಿ ಸುಮಾರು 119 ಕೋಟಿ ರೂಪಾಯಿ! ಸಾಗರ್ ರೇಶಮ್ ಟವರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮತ್ತು ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ನಡುವೆ ಇದೆ.

ವರದಿಯ ಪ್ರಕಾರ, ಸಿಂಗ್ ಅವರ ಹೊಸ ಕ್ವಾಡ್ರಪ್ಲೆಕ್ಸ್, ಟವರ್ ನ 16, 17, 18 ಮತ್ತು 19 ನೇ ಮಹಡಿಗಳಲ್ಲಿದೆ. ಇದು 1,300 ಚದರ ಅಡಿ ವೈಯಕ್ತಿಕ ಟೆರೇಸ್ ಮತ್ತು 11,266 ಚದರ ಅಡಿಗಳ ಒಟ್ಟು ಕಾರ್ಪೆಟ್ ಪ್ರದೇಶದೊಂದಿಗೆ ಬರುತ್ತದೆ. ರಣವೀರ್ ಮತ್ತು ಅವರ ತಂದೆ ಜುಗ್ಜೀತ್ ಸುಂದರ್ ಸಿಂಗ್ ಭಾವನಾನಿ ನಿರ್ದೇಶಕರಾಗಿರುವ ಓಹ್ ಫೈವ್ ಓಹ್ ಮೀಡಿಯಾ ವರ್ಕ್ಸ್ ಎಲ್.ಎಲ್.ಪಿ ಎಂಬ ಸಂಸ್ಥೆಯ ಮೂಲಕ ಸಿಂಗ್ ಮನೆಯನ್ನು ಖರೀದಿಸಿದ್ದಾರೆ. ಸ್ಟ್ಯಾಂಪ್ ಡ್ಯೂಟಿಯಾಗಿ ಕಂದಾಯ ಇಲಾಖೆಗೆ 7.13 ಕೋಟಿ ರೂ ಕಟ್ಟಿದ್ದಾರೆ ಎನ್ನಲಾಗಿದೆ. ಕಡತಗಳ ಪ್ರಕಾರ ನಟನಿಗೆ 19 ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಬಾಂದ್ರಾ-ಜುಹು ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶವಾಗಿದ್ದು, ಮಲ್ಟಿ ಮಿಲಿಯನೇರ್ ಗಳು ಮಾತ್ರ ಇಲ್ಲಿ ಮನೆ ಖರೀದಿಸಬಹುದು. ಬಹುತೇಕ ಬಾಲಿವುಡ್ ನ ಪ್ರಖ್ಯಾತ ನಟ ನಟಿ ನಿರ್ದೇಶಕ ನಿರ್ಮಾಪಕರು ಇಲ್ಲೇ ಮನೆ ಖರೀದಿಸುತ್ತಾರೆ. ಗ ಈ ಸಾಲಿಗೆ ರಣವೀರ್ ಕೂಡಾ ಸೇರಿದ್ದಾರೆ.