ಕಿರುತೆರೆ ನಟ ಹುಲಿವಾನ ಗಂಗಾಧರಯ್ಯ ನಿಧನ

ಬೆಂಗಳೂರು: ಕಿರುತೆರೆ ನಟ ಹುಲಿವಾನ ಗಂಗಾಧರಯ್ಯ ಶುಕ್ರವಾರ ರಾತ್ರಿ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ತಿಳಿಸಿದೆ.

ತುಮಕೂರು ಜಿಲ್ಲೆ ಕುಣಿಗಲ್‌ನ ಹುಲಿವಾನ ನಿವಾಸಿಯಾಗಿದ್ದ ಅವರು ರಂಗಭೂಮಯಲ್ಲಿ ಸುಮಾರು 55 ವರ್ಷ ತೊಡಗಿಸಿಕೊಂಡು, ಹಲವು ಸಿನಿಮಾಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿನ ಅವರ ನಟಿಸಿದರು.

ಅಲ್ಲದೇ ಕೃಷಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು ಹಾಗೂ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.