ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪರೇಡ್ನಲ್ಲಿ ನಟ ಅಲ್ಲು ಅರ್ಜುನ್ ಅವರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಪುಷ್ಪಾ ಡೈಲಾಗ್ ರೀತಿಯಲ್ಲಿ “ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ” ಎಂದಿದ್ದಾರೆ. ಇದರ ವಿಡೀಯೋ ತುಣುಕೊಂದು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಡೈಲಾಗ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪುಷ್ಪಾ ಖ್ಯಾತಿಯ ತೆಲುಗು ನಟ ಇತ್ತೀಚೆಗೆ ನ್ಯೂಯಾರ್ಕ್ನಲ್ಲಿದ್ದರು. ಅಲ್ಲಿ ಅವರು ಅಮೇರಿಕಾದಲ್ಲಿನ ಭಾರತೀಯರು ಆಯೋಜಿಸಿದ್ದ ಅತ್ಯಂತ ಪ್ರಸಿದ್ಧ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾದ ಇಂಡಿಯಾ ಡೇ ಪರೇಡ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಭಾನುವಾರ, ಅಲ್ಲು ನ್ಯೂಯಾರ್ಕ್ನಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದ ಕಾರ್ಯಕ್ರಮದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
"Yeh Bharat Ka Tiranga Hai, Kabhi Jhukega Nahi" ~ Actor Allu Arjun at India Day parade in New York, USA. pic.twitter.com/6WBPfizgTv
— Anshul Saxena (@AskAnshul) August 22, 2022
ಪರೇಡ್ನಲ್ಲಿ ಅಲ್ಲು ಅವರ ಪತ್ನಿ ಸ್ನೇಹಾ ರೆಡ್ಡಿ ಜೊತೆಗೂಡಿದ್ದರು. ಅಲ್ಲಿ ನಟನಿಗೆ ಗ್ರ್ಯಾಂಡ್ ಮಾರ್ಷಲ್ ಬಿರುದು ನೀಡಿ ಗೌರವಿಸಲಾಯಿತು. ಪರೇಡ್ನಲ್ಲಿ ರಾಷ್ಟ್ರಧ್ವಜವನ್ನು ಬೀಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅಲ್ಲು, “ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪರೇಡ್ನಲ್ಲಿ ಗ್ರ್ಯಾಂಡ್ ಮಾರ್ಷಲ್ ಆಗಿರುವುದು ಒಂದು ಗೌರವವಾಗಿದೆ” ಎಂದು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಬರೆದಿದ್ದಾರೆ.