ಹೆಚ್ಚುವರಿ ಟಿಕೆಟ್ ದರ ಪಡೆಯುವಂತಹ ಬಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಆರ್ ಟಿಒ ಎಚ್ಚರಿಕೆ

ಮಂಗಳೂರು:‌ ಟಿಕೆಟ್‌ ಗೆ ಹೆಚ್ಚುವರಿ ದರ ಪಡೆಯುವಂತಹ ಖಾಸಗಿ ಬಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುವರಿ ದರ ಪಡೆಯುವ ಬಸ್‌ನ ನೋಂದಣಿ ಸಂಖ್ಯೆ ಹಾಗೂ ರೂಟ್ ಮಾಹಿತಿಯನ್ನು ಲಿಖಿತವಾಗಿ, ಪುರಾವೆಯೊಂದಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಬೇಕು. ಅಂತಹ ವಾಹನಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಸರಕಾರದ ಅಧಿಸೂಚನೆಯ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರಯಾಣ ದರ ನಿಗದಿಪಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ. ಕೋವಿಡ್-19 ಅವಧಿಯಲ್ಲಿ ದ.ಕ. ಸಾರಿಗೆ ಪ್ರಾಧಿಕಾರವು ನಗರ ಮತ್ತು ಗ್ರಾಮಾಂತರ ಪ್ರಯಾಣ ದರ ಏರಿಕೆ ಮಾಡಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.