ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್: ಧನಂಜಯ್, ಯಜ್ಞಾ ಅತ್ಯುತ್ತಮ ನಟರು; ರಾಜ್ ಬಿ.ಶೆಟ್ಟಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ; ಆ್ಯಕ್ಟ್ 1978 ಅತ್ಯುತ್ತಮ ಚಿತ್ರ

ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022 ಅಕ್ಟೋಬರ್ 9 ರಂದು ಬೆಂಗಳೂರಿನ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರೋದ್ಯಮಗಳ ಅತ್ಯುತ್ತಮ ಚಲಚಿತ್ರಗಳು ಪ್ರಶಸ್ತಿಯನ್ನು ಬಾಚಿಕೊಂಡವು. 2020 ಮತ್ತು 2021 ರಲ್ಲಿ ತೆರೆಗೆ ಬಂದ ಅತ್ಯುತ್ತಮ ಚಲನಚಿತ್ರಗಳಿಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.

ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

ಅತ್ಯುತ್ತಮ ನಟನಾಗಿ ಬಡವ ರಾಸ್ಕಲ್ ಚಿತ್ರಕ್ಕಾಗಿ ಧನಂಜಯ್, ಅತ್ಯುತ್ತಮ ನಟಿಯಾಗಿ ಆ್ಯಕ್ಟ್ 1978 ಗಾಗಿ ಯಜ್ಞಾ ಶೆಟ್ಟಿ, ಅತ್ಯುತ್ತಮ ಚಲನಚಿತ್ರಕ್ಕಾಗಿ ಆ್ಯಕ್ಟ್ 1978, ಅತ್ಯುತ್ತಮ ನಿರ್ದೇಶಕನಾಗಿ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಪ್ರಶಸ್ತಿ ಪಡೆದುಕೊಂಡರು.

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಆ್ಯಕ್ಟ್ 1978 ನ ಬಿ ಸುರೇಶ್, ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ರತ್ನನ್ ಪ್ರಪಂಚಕ್ಕಾಗಿ ಉಮಾಶ್ರೀ ಪ್ರಶಸ್ತಿ ಪಡೆದರು.

ಅತ್ಯುತ್ತಮ ಸಂಗೀತ ಆಲ್ಬಂ ಬಡವ ರಾಸ್ಕಲ್‌ಗಾಗಿ ವಾಸುಕಿ ವೈಭವ್, ಅತ್ಯುತ್ತಮ ಸಾಹಿತ್ಯ ಆ್ಯಕ್ಟ್ ರ ತೇಲಾಡು ಮುಗಿಲೆಗಾಗಿ ಜಯಂತ್ ಕಾಯ್ಕಿಣಿ, ಅತ್ಯುತ್ತಮ ಹಿನ್ನೆಲೆ ಗಾಯಕ ನಿನ್ನ ಸನಿಹಕೆ ಚಿತ್ರದ ಮಳೆ ಮಳೆ ಮಳೆಗಾಗಿ ರಘು ದೀಕ್ಷಿತ್, ಅತ್ಯುತ್ತಮ ಹಿನ್ನೆಲೆ ಗಾಯಕಿ ಬಿಚ್ಚುಗತ್ತಿಯ ಧೀರ ಸಮ್ಮೋಹಗಾರಕ್ಕಾಗಿ ಅನುರಾಧ ಭಟ್, ಅತ್ಯುತ್ತಮ ನೃತ್ಯ ಸಂಯೋಜನೆ ಯುವರತ್ನದಿಂದ ಫೀಲ್ ದಿ ಪವರ್‌ಗಾಗಿ ಜಾನಿ ಮಾಸ್ಟರ್, ಜೀವಮಾನ ಸಾಧನೆ ಪ್ರಶಸ್ತಿಪುನೀತ್ ರಾಜ್‌ಕುಮಾರ್ (ಮರಣೋತ್ತರ) ಮತ್ತು ಅಲ್ಲು ಅರವಿಂದ್

ತೆಲುಗುವಿನಲ್ಲಿ ಪುಷ್ಪಾ ದ ರೈಸ್, ತಮಿಳಿನಲ್ಲಿ ಜೈ ಭೀಮ್ ಮತ್ತು ಮಳೆಯಾಳಂನಲ್ಲಿ ಅಯ್ಯಪ್ಪನುಂ ಕೋಶಿಯಮ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡವು.