ಪ್ರೊಆಕ್ಟಿವ್, ಟಾರ್ಗೆಟ್ ಕಾರ್ಪೊರೇಷನ್ನ ಅಪ್ & ಅಪ್ ಮತ್ತು ಕ್ಲಿನಿಕ್ ಸೇರಿದಂತೆ ಹಲವು ಬ್ರಾಂಡ್ಗಳ ಮೊಡವೆ ಉತ್ಪನ್ನಗಳು ಕ್ಯಾನ್ಸರ್ ಕಾರಕ ಅಂಶಗಳ ಮಟ್ಟವನ್ನು ಹೆಚ್ಚಿಸಿವೆ ಎಂದು ಸ್ವತಂತ್ರ ಪರೀಕ್ಷಾ ಪ್ರಯೋಗಾಲಯವು US ಆಹಾರ ಮತ್ತು ಔಷಧ ಮಂಡಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಮಂಗಳವಾರ ತಡರಾತ್ರಿ ತಿಳಿಸಿದೆ ಎಂದು ವರದಿಯಾಗಿದೆ.
ನಿಯಂತ್ರಕರು ತನಿಖೆ ನಡೆಸಿ ಸಕ್ರಿಯ ಘಟಕಾಂಶವಾದ ಬೆಂಜಾಯ್ಲ್ ಪೆರಾಕ್ಸೈಡ್ ಅನ್ನು ಒಳಗೊಂಡಿರುವ ಎಲ್ಲಾ ಸಂಬಂಧಿತ ಚಿಕಿತ್ಸೆಗಳನ್ನು ಹಿಂಪಡೆಯಲು ಲ್ಯಾಬ್ FDA ಯನ್ನು ಕೇಳಿದೆ.
ಹ್ಯಾಂಡ್ ಸ್ಯಾನಿಟೈಸರ್ಗಳು, ಸನ್ಸ್ಕ್ರೀನ್ಗಳು ಮತ್ತು ಡ್ರೈ ಶ್ಯಾಂಪೂಗಳು ಕೂಡ ಬೆಂಜೀನ್ನಿಂದ ಒಳಗೊಂಡಿವೆ. ಈಗ ಮೊಡವೆ ಚಿಕಿತ್ಸೆಗಳು ಕೂಡಾ ಕ್ಯಾನ್ಸರ್ಗೆ ಸಂಬಂಧಿಸಿದ ಹೆಚ್ಚಿನ ಮಟ್ಟದ ರಾಸಾಯನಿಕವನ್ನು ಒಳಗೊಂಡಿರುವ ವ್ಯಾಪಕವಾಗಿ ಬಳಸಲಾಗುವ ಗ್ರಾಹಕ ಉತ್ಪನ್ನಗಳ ಪಟ್ಟಿಗೆ ಸೇರುತ್ತಿವೆ.
ಬೆಂಜೀನ್ ಇದು ಗ್ಯಾಸೋಲಿನ್ ಮತ್ತು ತಂಬಾಕು ಹೊಗೆಯ ನೈಸರ್ಗಿಕ ಅಂಶವಾಗಿದೆ ಮತ್ತು US Centers for Disease Control and Prevention ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಕ್ಯಾನ್ಸರ್ ಅನ್ನು ಉಂಟುಮಾಡಬಹುದು ಎಂದು ವರದಿ ಉಲ್ಲೇಖಿಸಿದೆ.
ನ್ಯೂ ಹೆವನ್, ಕನೆಕ್ಟಿಕಟ್ ಮೂಲದ ವ್ಯಾಲಿಸೂರ್ LLC ಪರೀಕ್ಷಾ ಪ್ರಯೋಗಾಲಯವು ಮಂಗಳವಾರದ ಅರ್ಜಿಯನ್ನು ಸಲ್ಲಿಸಿದೆ ಮತ್ತು ಅಪಾಯಗಳನ್ನು ಬಹಿರಂಗಪಡಿಸಿದೆ. ಅದರ ಮೊಡವೆ ಸಂಶೋಧನೆಗಾಗಿ, ವ್ಯಾಲಿಸರ್ 66 ಬೆನ್ಝಾಯ್ಲ್ ಪೆರಾಕ್ಸೈಡ್ ಉತ್ಪನ್ನಗಳನ್ನು ಪರೀಕ್ಷಿಸಿದೆ. ಅದರಲ್ಲಿ ಕ್ರೀಮ್ಗಳು, ಲೋಷನ್ಗಳು, ಜೆಲ್ಗಳು ಮತ್ತು ವಾಶ್ಗಳು ಪ್ರಮುಖ ಚಿಲ್ಲರೆ ವ್ಯಾಪಾರಿ ಅಂಗಡಿ ಕೌಂಟರ್ನಲ್ಲಿ ಅಥವಾ ಪ್ರಿಸ್ಕ್ರಿಪ್ಷನ್ ಮೂಲಕ ಲಭ್ಯವಿದೆ. FDA ಮಾರ್ಗಸೂಚಿಗಳು ಪ್ರತಿ ಮಿಲಿಯನ್ಗೆ 2 ಭಾಗಗಳವರೆಗೆ ಬೆಂಜೀನ್ ಅನ್ನು ಅನುಮತಿಸಿದ್ದರೆ, ಕೆಲವು ಚಿಕಿತ್ಸೆಗಳಲ್ಲಿ ಅದರ ಒಂಬತ್ತು ಪಟ್ಟು ಪ್ರಮಾಣವನ್ನು ವ್ಯಾಲಿಸೂರ್ ಕಂಡುಕೊಂಡಿದೆ. ಉತ್ಪನ್ನಗಳನ್ನು ಹೆಚ್ಚಿನ ತಾಪಮಾನದಲ್ಲಿ ಪರೀಕ್ಷಿಸಿದಾಗ ಆ ಮಟ್ಟಗಳು ಗಮನಾರ್ಹವಾಗಿ ಏರಿಕೆಯಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಇದು ಹಲವಾರು ಜನಪ್ರಿಯ ಉತ್ಪನ್ನಗಳಲ್ಲಿ ಪತ್ತೆಯಾಗಿದೆ, ತಮ್ಮ ಸ್ನಾನಗೃಹದ ಕ್ಯಾಬಿನೆಟ್ಗಳಲ್ಲಿನ ಸಂಭಾವ್ಯ ಆರೋಗ್ಯ ಬೆದರಿಕೆಗಳ ಬಗ್ಗೆ ಗ್ರಾಹಕರ ಅರಿವನ್ನು ಹೆಚ್ಚಿಸುತ್ತಿದೆ ಮತ್ತು ಉದ್ಯಮದ ಎಫ್ಡಿಎ ಮೇಲ್ವಿಚಾರಣೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಜಾನ್ಸನ್ ಮತ್ತು ಜಾನ್ಸನ್, ಯೂನಿಲಿವರ್ ಪಿಎಲ್ಸಿ ಮತ್ತು ಪ್ರಾಕ್ಟರ್ ಎಂಡ್ ಗ್ಯಾಂಬಲ್ ಸೇರಿದಂತೆ ಹಲವು ಕಂಪನಿಗಳು ಅದಾಗಲೇ ತಮ್ಮ ಉತ್ಪನ್ನಗಳನ್ನು ಹಿಂಪಡೆದಿವೆ.