ಡಿಸೆಂಬರ್ 11 ರಂದು ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿರುವ ಶಾಲೆ, ಕಾಲೇಜುಗಳನ್ನು ಗುರುತಿಸಿ, ಗೌರವಿಸುವ ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮವು ಡಿಸೆಂಬರ್ 11 ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಪರ್ಯಾಯ ಮಠಾಧೀಶರು ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.

ಸಾಧಕ ಶಾಲೆ ಪ್ರಶಸ್ತಿ- ಪದವಿಪೂರ್ವ ಕಾಲೇಜು ವಿಭಾಗ

ಕಲಾ ವಿಭಾಗದಲ್ಲಿ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜು (ಚಿನ್ನ) ಹಾಗೂ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ), ವಾಣಿಜ್ಯ ವಿಭಾಗದಲ್ಲಿ ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜು (ಚಿನ್ನ) ಹಾಗೂ ಕರ್ಜೆ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ) ಮತ್ತು ವಿಜ್ಞಾನ ವಿಭಾಗದಲ್ಲಿ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು (ಚಿನ್ನ) ಹಾಗೂ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು (ಬೆಳ್ಳಿ) ಆಯ್ಕೆಯಾಗಿರುತ್ತದೆ.

ಪ್ರೌಢಶಾಲಾ ವಿಭಾಗ: ಸರಕಾರಿ ಶಾಲೆ ವಿಭಾಗದಲ್ಲಿ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜು-ಪ್ರೌಢಶಾಲಾ ವಿಭಾಗ (ಚಿನ್ನ) ಹಾಗೂ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು-ಪ್ರೌಢಶಾಲಾ ವಿಭಾಗ (ಬೆಳ್ಳಿ), ಅನುದಾನಿತ ಶಾಲೆಗಳಾದ ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆ (ಚಿನ್ನ) ಹಾಗೂ ಚೇರ್ಕಾಡಿಯ ಶಾರದ ಪ್ರೌಢಶಾಲೆ (ಬೆಳ್ಳಿ) ಮತ್ತು ಅನುದಾನ ರಹಿತ ಶಾಲೆಗಳಾದ ಕಲ್ಯಾಣಪುರದ ಮಿಲಾಗ್ರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ (ಚಿನ್ನ) ಹಾಗೂ ಮಲ್ಪೆಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ (ಬೆಳ್ಳಿ) ಆಯ್ಕೆಯಾಗಿರುತ್ತದೆ.

ಸಾಧಕ ಶಿಕ್ಷಕ ಪ್ರಶಸ್ತಿ

ಪ್ರೌಢಶಾಲಾ ವಿಭಾಗ: ಕನ್ನಡ ಮಾಧ್ಯಮ ವಿಭಾಗದಲ್ಲಿ ಚೇರ್ಕಾಡಿ ಶಾರದ ಪ್ರೌಢಶಾಲೆಯ ಶಾಲಿನಿ ಸಿ ಶೆಟ್ಟಿ (ಕನ್ನಡ), ರಮೇಶ್ ಶೆಟ್ಟಿ (ಹಿಂದಿ) ಹಾಗೂ ರೇವತಿ ಎಸ್. ಉಪ್ಪೂರ್ (ಸಮಾಜ ವಿಜ್ಞಾನ), ಉಡುಪಿ ನಿಟ್ಟೂರು ಪ್ರೌಢಶಾಲೆಯ ಹೆಚ್.ಎನ್. ಶೃಂಗೇಶ್ವರ (ಸಂಸ್ಕೃತ), ಕಲ್ಯಾಣಪುರ ಮಿಲಾಗ್ರೀಸ್ ಪ್ರೌಢಶಾಲೆಯ ರಿಚ್ಚಾರ್ಡ್ ಸಲ್ಡಾನ್ಹಾ (ಇಂಗ್ಲೀಷ್), ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲೆಯ ಲೊಲಿಫಾ ಲಿಝಿ ನೊರೋನ್ಹಾ (ಗಣಿತ), ಉಡುಪಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕಿರಣ ಕಾಮತ್ ಹಾಗೂ ಜ್ಯೋತಿ (ವಿಜ್ಞಾನ).

ಇಂಗ್ಲೀಷ್ ಮಾಧ್ಯಮ ವಿಭಾಗದಲ್ಲಿ ಉಡುಪಿ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಜಯಮಾಲಾ ನಾಯ್ಕ (ಕನ್ನಡ), ಸುನೀತಾ (ಸಂಸ್ಕೃತ), ಶುಭಾ ಆಚಾರ್ಯ (ಗಣಿತ), ರಜನಿ ಉಡುಪ ಮತ್ತು ದೀಪಾ ಜಿ.ಟಿ (ವಿಜ್ಞಾನ) ಹಾಗೂ ಎಮ್. ಪ್ರೀತಿ (ಸಮಾಜ ವಿಜ್ಞಾನ), ಕಲ್ಯಾಣಪುರ ಮಿಲಾಗ್ರೀಸ್ ಪ್ರೌಢಶಾಲೆಯ ಪ್ರಶಾಂತ್ ಲೋಪೆಜ್ (ಇಂಗ್ಲೀಷ್), ಕಲ್ಯಾಣಪುರ ಮೌಂಟ್ ರೋಸರಿ ಇಂಗ್ಲಿಷ್ ಪ್ರೌಢಶಾಲೆಯ ಮೀನಾ ಫೆರ್ನಾಂಡಿಸ್ (ಹಿಂದಿ), ದೈಹಿಕ ಶಿಕ್ಷಣ ವಿಭಾಗದಲ್ಲಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ದ ಜಗದೀಶ ಕೆ ಇವರನ್ನು ಆಯ್ಕೆ ಮಾಡಲಾಗಿರುತ್ತದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಸಾಧಕ ಶಾಲೆ ಮತ್ತು ಸಾಧಕ ಶಿಕ್ಷಕರ ಆಯ್ಕೆಯನ್ನು ನಡೆಸಿದ್ದು, ಉತ್ತಮ ಫಲಿತಾಂಶದೊಡನೆ, ಫಲಿತಾಂಶದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಈ ಆಯ್ಕೆಯನ್ನು ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.