ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., 2022-23ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ದಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಗುರುತಿಸಲ್ಪಟ್ಟು ಸಾಧನಾ ಪ್ರಸ್ತಿಗೆ ಭಾಜನವಾಗಿದೆ.
ಆ.19 ರಂದು ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಅಲೋಶಿಯಸ್ ಡ್ ಅಲ್ಮೇಡಾ, ಉಪಾಧ್ಯಕ್ಷ ಲೂವಿಸ್ ಲೋಬೋ ಮತ್ತು ಸಿಇಓ ಸಂದೀಪ್ ಫೆರ್ನಾಂಡೀಸ್ ಇವರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್.ರಾಜೇಂದ್ರ ಕುಮಾರ್ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಇವರಿಂದ ಸಾಧನಾ ಪ್ರಶಸ್ತಿಯನ್ನು ಸ್ವೀಕರಿಸಿದರು.
1997ನೇ ಇಸವಿಯಲ್ಲಿ ಅರಂಭಗೊಂಡ ಸಂಘವು ಕಳೆದ 25 ವರ್ಷಗಳಿಂದ ಸತತ ಲಾಭದ ಹಾದಿಯಲ್ಲಿ ಸಾಗಿದ್ದು, ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಲೆಕ್ಕ ಪರಿಶೋಧನೆಯಲ್ಲಿ “ಎ” ಗ್ರೇಡ್ ಪಡೆದುಕೊಂಡಿರುವ ಬ್ಯಾಂಕ್ ತನ್ನ ಸದಸ್ಯರಿಗೆ ಶೇ.20 ರಷ್ಟು ಡೆವಿಡೆಂಡ್ ನೀಡಲು ನಿರ್ಧರಿಸಿದೆ.
2022-23 ನೇ ಸಾಲಿನಲ್ಲಿ 6091 ಸದಸ್ಯರು, 1.13 ಕೋಟಿ ರೂ ಪಾಲು ಬಂಡವಾಳ, 30.91 ಠೇವಣಿ, 1.66 ಕೋಟಿ ನಿಧಿ, 9.10 ಕೋಟಿ ಹೂಡಿಕೆ, 22.23 ಹೊರ ಬಾಕಿ ಸಾಲ, 33 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2022-23 ನೇ ಸಾಲಿನಲ್ಲಿ 83.81 ಕೋಟಿ ಲಾಭಾಂಶ ದಾಖಲಿಸಿದೆ.
ಈ ಸಾಧನೆಗೆ ಸಹಕರಿಸಿದ ಎಲ್ಲಾ ಸದಸ್ಯರು, ಗ್ರಾಹಕರು ಮತ್ತು ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯು ಕೃತಜ್ಞತೆ ಸಲ್ಲಿಸಿದೆ.