ಇನ್ಫೋಸಿಸ್‌ನ ವಾರ್ಷಿಕ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರಿನ ಇನ್ಫೋಸಿಸ್ ಕ್ಯಾಂಪಸಿನಲ್ಲಿ 21 ಆಗಸ್ಟ್, 2025 ರಂದು ನಡೆದ ಇನ್ಫೋಸಿಸ್ ವಾರ್ಷಿಕ ಪ್ರಾಜೆಕ್ಟ್ ಪ್ರದರ್ಶನ-2025 ರಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಗಾರ್ಡಿಯನ್ : ರಿಯಲ್- ಟೈಮ್ ಪ್ರೋಟೆಕ್ಷನ್, ರಿಯಲ್- ವರ್ಲ್ಡ್ ಇಂಪ್ಯಾಕ್ಟ್” ಎಂಬ ಶೀರ್ಷಿಕೆಯ ಈ ಯೋಜನೆಯನ್ನು ಭೂಷಣ್ ಪೂಜಾರಿ, ಪ್ರಜ್ವಲ್ ಗುಲ್ವಾಡಿ, ಅಮೃತ ಅಭಿವೃದ್ಧಿ ಪಡಿಸಿದರು. ಗಾರ್ಡಿಯನ್ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳು, ಹಿಂಸೆ, ಅಪಘಾತಗಳು, ಅನುಮಾನಾಸ್ಪದ ನಡವಳಿಕೆ, ಸಂಭಾವ್ಯ ಬೆದರಿಕೆಗಳನ್ನು ಪತ್ತೆಹಚ್ಚಿದ ನಂತರ ಭದ್ರತಾ ತಂಡಗಳು ಅಥವಾ ಸ್ಥಳೀಯ ಅಧಿಕಾರಿಗಳಿಗೆ ತ್ವರಿತ ಎಚ್ಚರಿಕೆಯನ್ನು ಕಳುಹಿಸುವಂತೆ ತಯಾರಿಸಲಾಗಿದೆ.

ಯೋಜನೆಯು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಶ್ಲಾಘನೀಯ ಸಾಧನೆಗಾಗಿ ಮತ್ತು ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಎಸ್ ಎಮ್ ವಿ ಐ ಟಿ ಬಂಟಕಲ್‌ನ್ನು ಪ್ರತಿನಿಧಿಸಿದಕ್ಕಾಗಿ ವಿದ್ಯಾರ್ಥಿಗಳನ್ನು ಹಾಗೂ ಅವರ ಮಾರ್ಗದರ್ಶಕರನ್ನು ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.