ಉಡುಪಿ: 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿ.ಯು.ಸಿ., ಸಿ.ಇ.ಟಿ., ನೀಟ್, ಜೆ.ಇ.ಇ. ಮೇನ್ಸ್ , ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯು ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫಲಿತಾಂಶಕ್ಕಾಗಿ ನೂತನ ರೀತಿಯ ತರಬೇತಿಯನ್ನು ಹಮ್ಮಿಕೊಂಡಿದೆ.
ಐಬಿಪಿಎಸ್ ಹಾಗೂ ಇತರೇ ಬ್ಯಾಂಕ್ಗಳು ಅಯೋಜಿಸಲಿರುವ ಎಸ್ಬಿಐ ಪಿ.ಒ. ಮತ್ತು ಕ್ಲರ್ಕ್ ಹುದ್ದೆಗಳಿಗಾಗಿ ಪರೀಕ್ಷೆಗಳು ಜರಗಲಿರುವುದರಿಂದ ಸಂಜೆಯ ಮತ್ತು ವಾರಾಂತ್ಯದ ತರಗತಿಗಳು ಜೂ. 22ರಿಂದ ಆರಂಭ ವಾಗಲಿದೆ.
ವಾರಾಂತ್ಯದ ತರಗತಿಗಳು ಶನಿವಾರ ಮಧ್ಯಾಹ್ನ 2ರಿಂದ 5ರ ವರೆಗೆ ಹಾಗೂ ರವಿವಾರ ಬೆಳಗ್ಗೆ 9.30 ರಿಂದ ಸಂಜೆ 5ರ ವರಗೆ ಜರಗಲಿದೆ. ಸಂಜೆಯ ತರಗತಿಗಳು 5ರಿಂದ 6.30ರ ವರೆಗೆ ಸೋಮವಾರದಿಂದ ಶನಿವಾರದ ವರೆಗೆ ನಡೆಯಲಿದೆ.
ಕಳೆದ 4 ವರ್ಷಗಳಿಂದ ಬ್ಯಾಂಕಿಂಗ್ ಪರೀಕ್ಷೆಗಾಗಿ ತರಬೇತಿಯನ್ನು ಯಶಸ್ವಿ ಯಾಗಿ ಆಯೋಜಿಸುತ್ತಿದ್ದು, ಈಗಾಗಲೇ 550ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬ್ಯಾಂಕ್ ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ತರಬೇತಿಯ ಸಂದರ್ಭದಲ್ಲಿ ರೈಲ್ವೇಸ್, ಇನ್ಶೂರೆನ್ಸ್ , ಐಟಿ ಹಾಗೂ ವಿವಿಧ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು.
ತರಬೇತಿಯ ಸಂದರ್ಭದಲ್ಲಿ ಈ ಎಲ್ಲ ವಿಷಯಗಳ ಕುರಿತಾಗಿ ಪರಿಷ್ಕೃತ ಮಾಹಿತಿಯನ್ನೊಳಗೊಂಡ ಉಪಯುಕ್ತ ಕೃತಿಗಳನ್ನು ನೀಡಲಾಗುವುದು. ತರಬೇತಿಯ ಅಂತ್ಯದಲ್ಲಿ ಮಾದರಿ ಆನ್ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ಪ್ರಕಾಶಕರುಗಳ ಕೃತಿಗಳನ್ನು ಗ್ರಂಥಾಲಯದ ವ್ಯವಸ್ಥೆಗಳ ಮೂಲಕ ನೀಡಲಾಗುವುದು.
ಈ ತರಬೇತಿಯು ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ಏಸ್ ಸೆಂಟರ್ನಲ್ಲಿ ಜರಗಲಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಕಚೇರಿಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಪಿ.ಲಾತವ್ಯ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.