ಆಚಾರ್ಯಾಸ್ ಏಸ್: ಬ್ರಹ್ಮಾವರದಲ್ಲಿ ನೂತನ ಶಾಖೆ ಶುಭಾರಂಭ

ಉಡುಪಿ: ಒಂಭತ್ತನೇ ತರಗತಿ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಸಿ.ಇ.ಟಿ., ನೀಟ್, ಜೆ.ಇ.ಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕ್ರಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯ ನೂತನ ಶಾಖೆಯು ಬ್ರಹ್ಮಾವರದಲ್ಲಿರುವ ಸೈಂಟ್ ಮೇರಿಸ್ ಫಿರಿಯನ್ ಚರ್ಚ್‍ನ ಮುಂಭಾಗದ ಮಧುವನ್ ಕಾಂಪ್ಲೇಕ್ಸ್‍ನ ಮೊದಲನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ವಿಜಯದಶಮಿ ಹಾಗೂ ಮಧ್ವಜಯಂತಿ ಪ್ರಯುಕ್ತ ಏಸ್ ಕಚೇರಿಯಲ್ಲಿ ಶ್ರೀಅನಂತೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ, ಶ್ರೀವೇದವ್ಯಾಸ ಐತಾಳ್ ವಿವಿಧ ಹೋಮಹವನಾಧಿಗಳನ್ನು ನಡೆಸಿದರು. ಶ್ರೀ ಕೇಮಾರು ಸಾಂದೀಪಿನಿ ಆಶ್ರಮದ ಶ್ರೀಈಶವಿಠಲದಾಸ ಶ್ರೀಪಾದರು ಆಶೀರ್ವಚನಗೈದರು.  ಏಸ್ ಸಂಸ್ಥೆಯು ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಕ್ಕೂ ವಿಶೇಷ ಒತ್ತು ನೀಡಲಿ ಎಂದು ಹೇಳಿ ಸಂಸ್ಥೆಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಚಂದ್ರಮೌಳೀಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀವೇದಮೂರ್ತಿ ಬಾಲಕೃಷ್ಣ ತಂತ್ರಿಯವರು ದೇವಾಲಯದ ವಿಶೇಷ ಪ್ರಸಾದವನ್ನು ನೀಡಿ ಸಂಸ್ಥೆಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಒಳಿತಾಗಲಿ ಎಂದು ಹಾರೈಸಿದರು. ಈ ಶುಭ ಸಂದರ್ಭದಲ್ಲಿ ಶೀರೂರು ಮೂಲಮಠದ ಶ್ರೀಮುಖ್ಯಪ್ರಾಣ ದೇವರ ಪ್ರಧಾನ ಅರ್ಚಕರಾದ ಶ್ರೀಲಕ್ಷ್ಮೀನಾರಾಯಣ ಭಟ್, ಸಾಲಿಗ್ರಾಮ ಶ್ರೀಗುರುನರಸಿಂಹ ದೇವಾಲಯದ ಪ್ರಧಾನ ಅರ್ಚಕರಾದ  ಜನಾರ್ಧನ ಅಡಿಗ, ಉಡುಪಿಯ ಶ್ರೀರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಅಪ್ಪಣ್ಣ ಆಚಾರ್ಯ, ಮಡಾಮಕ್ಕಿ ಅನಂತ ತಂತ್ರಿ, ಶ್ರೀನಿವಾಸ ಆಚಾರ್ಯ, ಮಧುವನ್ ಕಟ್ಟಡದ ಮಾಲಿಕರಾದ ಶ್ಯಾಮ್ ಪೂಜಾರಿ, ಸಂಜೀವಣ್ಣ ಉಪಸ್ಥಿತರಿದ್ದರು. ಬ್ರಹ್ಮಾವರ ಏಸ್‍ನ ನಿರ್ದೇಶಕರಾದ ಅಕ್ಷೋಭ್ಯ ಆಚಾರ್ಯ ಅತಿಥಿಗಳಿಗೆ ಫಲಕಾಣಿಕೆ ಸ್ಮರಣಿಕೆಯನ್ನು ನೀಡಿದರು. ಐರಾ ಆಚಾರ್ಯ ಪ್ರಾರ್ಥಿಸಿದರು. ಶ್ರೀ ಲಾತವ್ಯ ಆಚಾರ್ಯ ಪ್ರಸ್ತಾಪಿಸಿ ವಂದಿಸಿದರು. ಅಕ್ಟೋಬರ್ 20ರಿಂದ ಬ್ರಹ್ಮಾವರದ ಏಸ್ ಕಚೇರಿಯಲ್ಲಿ 10ನೇ ಹಾಗೂ 9ನೇ ತರಗತಿಗಾಗಿ ಕ್ರಾಶ್‍ಕೋಸ್‍ಗಳು ಆರಂಭವಾಗಲಿದ್ದು ಹೆಚ್ಚಿನ ಮಾಹಿತಿಗಾಗಿ ಬ್ರಹ್ಮಾವರ ಏಸ್ ಕಚೇರಿಯನ್ನು(9901420714) ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.