ಉಡುಪಿ: ಸರ್ಕಾರಿ ಬಸ್ ಕೊರತೆ ಮತ್ತು ಸಮಸ್ಯೆಗಳ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಡೆಸಿದ ರಾಜ್ಯಾದ್ಯಂತ ಹೋರಾಟದ ಅಂಗವಾಗಿ ಅ. ಭಾ. ವಿ. ಪ. ಉಡುಪಿ ವತಿಯಿಂದ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಹೋರಾಟ ನಡೆಸಲಾಯಿತು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ ಭಟ್, ತಾಲೂಕು ಸಂಚಾಲಕ ಶ್ರೀಹರಿ , ನಗರ ಕಾರ್ಯದರ್ಶಿ ಗಣೇಶ್ ಪೂಜಾರಿ ಹಾಗೂ ಪ್ರಮುಖರದ ಆಶೀಶ್ ಶೆಟ್ಟಿ, ಅಜಿತ್, ವಿನೋದ, ನವೀನ್ ,ಉಪಸ್ಥಿತರಿದ್ದರು.
ನಗರ ಸಹ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಬರುವ ಸಂದರ್ಭದಲ್ಲಿ ಶಕ್ತಿ ಯೋಜನೆಯಿಂದ ದೊಡ್ಡ ಮಟ್ಟದ ಸಮಸ್ಯೆ ಪ್ರಾರಂಭವಾಗಿದ್ದು ಈ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಸರಕಾರಿ ಬಸ್ ಗಳಿಗೆ ಮುತ್ತಿಗೆ ಹಾಕುವ ಎಚ್ಚರ ನೀಡಿದರು.