ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಆಟಿಡೊಂಜಿ ದಿನ ಆಚರಣೆ

ಉಡುಪಿ: ಪ್ರತಿಯೊಂದು ಕಾಲಮಾನಗಳಿಗೆ ಅನುಗುಣವಾಗಿ ಮನುಷ್ಯನ ಆಹಾರ ಕ್ರಮಗಳು ಕೂಡ ಜೊತೆಯಾಗುತ್ತದೆ. ತುಳುನಾಡಿನಲ್ಲಿ ಆಚರಿಸುವ ಆಟಿ ಅಂದ್ರೆ ಆಷಾಡ ತಿಂಗಳಲ್ಲಿ ಆರೋಗ್ಯಕ್ಕೆ ಪೂರಕವಾದ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ  ಹಾಗೂ ಎಲ್ಲರೊಂದಿಗೆ ಕುಳಿತು ಸಹಭೋಜನ ಮಾಡುವ ವಿಶೇಷ ಕಾರ್ಯಕ್ರಮವೊಂದನ್ನು ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿ ಬೇರೆ ಬೇರೆ ಬಗೆಯ ಅಡುಗೆಗಳನ್ನು ತಯಾರಿ ಮಾಡಿಕೊಂಡು ಬಂದು ತಮ್ಮ ತಮ್ಮ ತರಗತಿಗಳಲ್ಲಿ ಎಲ್ಲ ಸಹಪಾಠಿಗಳ ಜೊತೆಗೆ ಕುಳಿತು ಭೋಜನ ಸವಿದರು. ಶಿಕ್ಷಕ ವೃಂದದವರು ಕೂಡ ಈ ಕಾರ್ಯಕ್ರಮದಲ್ಲಿ ಜೊತೆಯಾದರು.

ಸಹಬಾಳ್ವೆಯ ಸಹಭೋಜನದ ಮಹತ್ವವನ್ನು ಸಾರುವ ಅದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎಲ್ಲ ವಿದ್ಯಾರ್ಥಿಗಳು, ಇಂತಹದ್ದೊಂದು ಅವಕಾಶ ಜೀವನದಲ್ಲಿ ಮೊತ್ತಮೊದಲ ಬಾರಿಗೆ ದೊರೆತದ್ದು, ಜೀವನದಲ್ಲಿ ಮರೆಯಲಾಗದ ಕ್ಷಣ ಎಂದರು.