ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ ಆಟಿಡೊಂಜಿ ದಿನ

ಉಡುಪಿ: ನಗರದ ಅಲಂಕಾರ್ ಟಾಕೀಸ್ ಬಳಿ ಇರುವ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ ನಿವಾಸಿಗಳ ಸಂಘದ ಸೊಸೈಟಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು ,
ಸೊಸೈಟಿಯ ಅಧ್ಯಕ್ಷ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿ, ನಮ್ಮ ಹಿರಿಯರು ಅಂದಿನ ಕಷ್ಟದ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಪರಿಸರದಲ್ಲಿ ದೊರೆಯುವ ವಿವಿಧ ತರಕಾರಿಗಳಿಂದ ತಿಂಡಿ ತಿನಿಸುಗಳನ್ನು ತಯಾರಿಸಿ ಎಲ್ಲರೂ ಒಟ್ಟಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಅಂದಿನ ಕೂಡು ಕುಟುಂಬದ ಐಕ್ಯಮತ್ಯ ಇಂದು ಕಾಣತ್ತಿಲ್ಲ. ಈ ರೀತಿಯ ಕಾರ್ಯಕ್ರಮವನ್ನು ವಸತಿ ಸಮುಚ್ಛಯದ ನಿವಾಸಿಗಳು ಒಟ್ಟಿಗೆ ಸೇರಿ ಮಾಡುವುದರಿಂದ ನಮ್ಮಲ್ಲಿ ಸ್ನೇಹ ಸಂವೃದ್ದಿ ಸಂಘಟನೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಲ್ಯಾನ್ಸಿ ಡಿಯಾಸ್, ರಾಘವ ನಾಯಕ , ಅನ್ಸಿಲ್ಲ ಕ್ರಸ್ಟ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸತೀಶ ಹೆಗ್ಡೆ ಸ್ವಾಗತಿಸಿದರು, ಪ್ರವೀಣ ರೈ ನಿರೂಪಿಸಿದರು.

ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ ನಡೆಯಿತು.

ವಿವಿಧ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಆಟಿದ ವಿವಿಧ ತಿನಿಸುಗಳನ್ನು ಉಣ ಬಡಿಸಲಾಯಿತು.

ಮನೋರಂಜನಾ ಕಾರ್ಯಕ್ರಮಕ್ಕೆ ಸೀಮಾ ಚಂದ್ರ ಶೇಖರ್ , ವಿದ್ಯಾ ಸರಸ್ವತಿ , ಶ್ರುತಿ , ವಿದ್ಯಾ , ಜ್ಯೋತಿ ಸಹಕರಿಸಿದರು.