ನವದೆಹಲಿ: ಪೋಷಣ್ ಅಭಿಯಾನ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮಕ್ಕಳ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ.
ಪೋಷಣ್ ಟ್ರ್ಯಾಕರ್‌ನಲ್ಲಿ ತಾಯಿಯ ಆಧಾರ್ ಐಡಿಯನ್ನು ನಮೂದಿಸಲಾಗಿದೆ ಎಂದು ಖಚಿತಪಡಿಸಿ ಫಲಾನುಭವಿಗೆ ಪೌಷ್ಟಿಕಾಂಶದ ವಿತರಣೆಯನ್ನು ಮಾಡಲಾಗುತ್ತದೆ. ಮನೆಗೆ ಕೊಂಡು ಹೋಗಬಹುದಾದ ಪಡಿತರವನ್ನು ವಿತರಿಸುವ ಬಗ್ಗೆ ಫಲಾನುಭವಿಗೆ ಎಸ್.ಎಂ.ಎಸ್ ಸಂದೇಶ ಕಳುಹಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.