ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ಬಳಿಕ ಕುಟುಂಬದೊಂದಿಗೆ ಪುನರ್ಮಿಲನ ಕಂಡ ಯುವಕ

ಮಂಜೇಶ್ವರ: ಇಲ್ಲಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಮರಳಿ ಕುಟುಂಬಕ್ಕೆ ಸೇರಿಸಲಾಯಿತು. 2021 ಸೆಪ್ಟೆಂಬರ್ 15ರಂದು, ಇಮ್ತಿಯಾಸ್ ಎಂಬ 27 ವರ್ಷದ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮಂಜೇಶ್ವರದ ಬೀದಿಯಿಂದ ರಕ್ಷಿಸಿ ಆತನನ್ನು ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ
ದಾಖಲಿಸಿತ್ತು.

ದಾಖಲಾತಿಯ ಸಮಯದಲ್ಲಿ, ಇಮ್ತಿಯಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಆತನಲ್ಲಿ ಮಾನಸಿಕ ಆರೋಗ್ಯಕ್ಕೆ
ಸಂಬಂಧಪಟ್ಟ ರೋಗಲಕ್ಷಣಗಳು ಕಂಡುಬಂದವು. ಸ್ನೇಹಾಲಯದ ತಂಡವು ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿ ಮುಂಬೈಯ ಶ್ರದ್ಧಾ ಫೌಂಡೇಶನ್ ನ ಬೆಂಬಲದೊಂದಿಗೆ ಅತನ ಕುಟುಂಬವನ್ನು ಪತ್ತೆಹಚ್ಚಿತು.

2023ರ ಡಿಸೆಂಬರ್ 23ರಂದು, ಕರ್ನಾಟಕದ ಬಳ್ಳಾರಿ ಮೂಲದ ಇಮ್ತಿಯಾಸ್ ಕುಟುಂಬವು ತಮ್ಮ ಮಗನನ್ನು ಮರಳಿ ಪಡೆಯಲು ಸ್ನೇಹಾಲಯ ಮಂಜೇಶ್ವರಕ್ಕೆ ಆಗಮಿಸಿತು. ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ನಂತರ ಆತನನ್ನು ನೋಡಿ ಆತನ ಪೋಷಕರು, ಆತನ ಸಹೋದರಿ ಮತ್ತು ಚಿಕ್ಕಮ್ಮ ಭಾವಾತಿರೇಕದಲ್ಲಿ ಮುಳುಗಿದ್ದರು. ಪುನರ್ಮಿಲನವು ಒಂದು ಸ್ಮರಣೀಯ ಉಡುಗೊರೆಯಾಗಿ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ವತಿಯಿಂದ ಇಮ್ತಿಯಾಸ್ ಕುಟುಂಬಕ್ಕೆ ನೀಡಲಾಯಿತು ಇಡೀ ಕುಟುಂಬವು ಸಂತೋಷದಿಂದ ಇಮ್ತಿಯಾಜ್ ನನ್ನು ಬರಮಾಡಿಕೊಂಡಿತು.

ಇಮ್ತಿಯಾಜ್ ಗೆ ನೀಡಿದ ಪೋಷಣೆ, ಆರೈಕೆ ಹಾಗೂ ಮಾತೃವಾತ್ಸಲ್ಯಕ್ಕಾಗಿ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರಿಗೆ ಕುಟುಂಬ ಸದಸ್ಯರು ಕೃತಜ್ಞತೆಯನ್ನು ಸಲ್ಲಿಸಿದರು.

ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು, ತಮ್ಮ ಮಗನ ಯಶಸ್ವಿ ಪುನರ್ಮಿಲನದಲ್ಲಿ ಅವರ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿತು.