ಕುಡಿಯೋದೆ ನಮ್ ವೀಕ್ನೆಸ್ಸು ಅನ್ನುತ್ತಿರುವ ಕೋತಿ: ಗ್ರಾಹಕರ ಕೈಯಿಂದ ಬಿಯರ್ ಬಾಟಲಿ ಕಸಿಯುವ ಕೋತಿ ವೀಡಿಯೋ ವೈರಲ್

ರಾಯಬರೇಲಿ: ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಅನ್ನು ಗಟಗಟ ಕುಡಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಕೋತಿ, ಹತ್ತಿರದ ವೈನ್ ಶಾಪ್‌ನಿಂದ ಮದ್ಯ ಖರೀದಿಸಲು ಬರುವವರ ಕೈಯಿಂದ ಮದ್ಯವನ್ನು ಕಸಿದುಕೊಳ್ಳುತ್ತದೆ ಎಂದು ಸುದ್ದಿ ಸಂಸ್ಥೆ ಆಜ್‌ತಕ್ ವರದಿ ಮಾಡಿದೆ. ವೈನ್ ಶಾಪ್ ಮಾಲಿಕ ಕೋತಿಯ ವರ್ತನೆಯಿಂದ ಬೇಸತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅಧಿಕಾರಿಗಳನ್ನು ಮಂಗನನ್ನು ಓಡಿಸಿ ಎಂದು ಉದಾಸೀನ ತೋರಿದ್ದಾರೆ. ವೀಡೀಯೋ ವೈರಲ್ ಆದ ಬಳಿಕ ಎಚ್ಚೆತ್ತ ಅಧಿಕಾರಿಗಳು ಮಂಗನನ್ನು ಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೋತಿಯು ಗ್ರಾಹಕರಿಂದ ಮದ್ಯ ಕಸಿದುಕೊಳ್ಳುವುದಲ್ಲದೆ, ಅಂಗಡಿಯಿಂದ ಬಾಟಲಿಗಳನ್ನು ಕದಿಯಲು ಹಲವು ಬಾರಿ ಪ್ರಯತ್ನಿಸಿದೆ. ಮದ್ಯ ದೊರೆಯದಿದ್ದರೆ ಅಂಗಡಿಯಲ್ಲಿ ಗಲಾಟೆ ಕೂಡಾ ಮಾಡುತ್ತದೆ ಎಂದು ಅಂಗಡಿಯ ಸಹಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅನುರಾಗ್ ಮಿಶ್ರಾ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಅಕ್ಟೋಬರ್ 30 ರಂದು ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ, “ರಾಯಬರೇಲಿಯಲ್ಲಿ, ಕೋತಿಯೊಂದು ಮದ್ಯಪಾನ ಮಾಡುವ ವೀಡಿಯೊ ವೈರಲ್ ಆಗಿದೆ, ಇದು ಮದ್ಯದ ಅಂಗಡಿಗೆ ಬರುವ ಜನರಿಂದ ಮದ್ಯವನ್ನು ಕಸಿದುಕೊಂಡು ಕುಡಿಯುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಕೇವಲ ಮಾನವ ಮಾತ್ರವಲ್ಲ, ಮದ್ಯದ ಗೀಳಿಗೆ ಬಿದ್ದ ಪ್ರಾಣಿ ಪಕ್ಷಿಗಳೂ ಕುಡಿದು ತೂರಾಡುವ ದೃಶ್ಯಗಳು ದಿನನಿತ್ಯ ಕಣ್ಣಮುಂದೆ ಬರುತ್ತಿರುವುದು ಕಾಲದ ಮಹಿಮೆ ಎನ್ನಬಹುದು.