350 ವರ್ಷಗಳ ಇತಿಹಾಸ ಹೊಂದಿರುವ ಮಹಾಗಣಪತಿಯ ಅತಿ ವಿಶಿಷ್ಟ ಆರಾಧನೆ

ಉಡುಪಿ: ಇಲ್ಲಿನ ದಿನಪತ್ರಿಕೆ ವಿತರಕ ಮಲ್ಪೆ ಗೋಪಾಲ್ ಕೃಷ್ಣ ಭಂಡಾರ್ಕಾರ್ ನೇತೃತ್ವದಲ್ಲಿ ಕಿದಿಯೂರು ಭಂಡಾರ್ಕಾರ್ ಟ್ರಸ್ಟ್ ವತಿಯಿಂದ 350 ವರ್ಷಗಳ ಇತಿಹಾಸ ಹೊಂದಿರುವ ಮಹಾಗಣಪತಿಯ ಆರಾಧನೆಯು ವಿಶಿಷ್ಟವಾಗಿದೆ.

ಗಣಪತಿಯ ಮೂರ್ತಿಯನ್ನು ಪ್ರತಿವರ್ಷವೂ ಮನೆಯವರೇ ತಯಾರಿಸುತ್ತಾರೆ. ಟ್ರಸ್ಟಿನ 150 ಕ್ಕೂ ಹೆಚ್ಚಿನ ಸದಸ್ಯರು ತಯಾರು ಮಾಡಿದ 5 ಅಡಿ ಎತ್ತರದ ಮೂರ್ತಿ ಕಣ್ಮನ ಸೆಳೆಯುತ್ತದೆ. ಗಣೇಶೋತ್ಸವ ಸಂದರ್ಭದಲ್ಲಿ 5 ದಿನ ಆಚರಣೆ ನಡೆಯುತ್ತದೆ.ಇಲ್ಲಿ ಗಣಪತಿಗೆ ನೀಡಲಾಗುವ ಸೇವೆಗಳಲ್ಲಿ ಮೂಡುಗಣಪತಿ, ದೀಪಾರಾಧನೆ, ರಂಗಪೂಜೆ, ಹೂವಿನಪೂಜೆ, ದಿನ ನಿತ್ಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯುತ್ತದೆ. ಮೂರ್ತಿ ವಿಸರ್ಜನೆ ವೇಳೆ ತೆಪ್ಪಂಗಾಯಿ ಸೇವೆ, ಮೊಸರು ಕುಡಿಕೆ, ಮೆರವಣಿಗೆ, ತೆಪ್ಪೋತ್ಸವ ನಡೆಸಿ ಅಂತಿಮವಾಗಿ ಪುಸ್ಕರಣಿಯಲ್ಲಿ ಜಲಸ್ತಂಭನ ಮಾಡಲಾಗುತ್ತದೆ.