ಉಡುಪಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಮುಂದಾಳತ್ವದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡದಿಂದ ಮಾನಸಿಕ ಆರೋಗ್ಯದ ಕುರಿತಾದ ‘ಮಾನಸ ‘ ಎಂಬ ಬೀದಿನಾಟಕ ಉಡುಪಿ ನಗರದ ಸಹಿತ ಜಿಲ್ಲೆಯಾದ್ಯಂತ ಪ್ರದರ್ಶನಗೊಂಡಿತು.
ಶಿಲ್ಪಾ ಶೆಟ್ಟಿ ಬೀದಿ ನಾಟಕ ರಚಿಸಿ, ನಿರ್ದೇಶಿಸಿದರು. ಗೀತಂ ಗಿರೀಶ್ ಸಂಗೀತ ನೀಡಿದರು. ಸಂಚಾಲಕರಾಗಿ ರಾಜೇಶ್ ಭಟ್ ಪಣಿಯಾಡಿ ಕಾರ್ಯ ನಿರ್ವಹಿಸಿದರು.