ಕಡಬ: ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು 45 ಕೆಜಿ ತೂಕದ ಆಡನ್ನು ನುಂಗಲು ಪ್ರಯತ್ನಿಸಿ ವಿಫಲವಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ಮೆಲ್ಲನೆ ಕಾಡಿಗೆ ತೆರಳಿದ ಘಟನೆ ವರದಿಯಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಆಡನ್ನು ಹೆಬ್ಬಾವು ತನ್ನ ಉರುಳಿಗೆ ಸಿಲುಕಿಸಿಕೊಂಡಿದೆ. ಹೆಬ್ಬಾವು ಆಡಿನ ತಲೆಯ ಭಾಗವನ್ನು ನುಂಗಿದ್ದರೂ ಉಳಿದ ಭಾಗವನ್ನು ನುಂಗಲು ಅದಕ್ಕೆ ಸಾಧ್ಯವಾಗಲಿಲ್ಲ. ಹೆಬ್ಬಾವಿನ ಸುರುಳಿಗೆ ಸಿಲುಕಿದ್ದ ಆಡು ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಹೆಬ್ಬಾವು ಮರಳಿ ಕಾಡು ಸೇರಿಕೊಂಡಿದೆ.