ಗುಣಮಟ್ಟದ ಶಿಕ್ಷಣ, ಹೈಟೆಕ್ ಸೌಲಭ್ಯದ ಸಂಸ್ಥೆ , ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಶಿಕ್ಷಣ, ತರಬೇತಿ
ನೀಡುವ ಕರಾವಳಿಯ ಅತೀ ಹೆಚ್ಚು ಬೇಡಿಕೆಯ ಕಾಲೇಜು
ಕರಾವಳಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಹತ್ತಾರು ಕಾಲೇಜುಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಹೊಸ ಬದುಕನ್ನು ನೀಡಿವೆ. ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿಗೆ ಇದೀಗ ಕಾರ್ಕಳದ ಕ್ರಿಯೇಟಿವ್ ಕಾಲೇಜು ಸೇರಿದೆ.
ಕರಾವಳಿಯ ಬಹುತೇಕ ಟಾಪ್ ಕಾಲೇಜುಗಳಲ್ಲಿ ಹತ್ತಾರು ವರ್ಷ ಬೋಧನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಉತ್ಸಾಹಿ, ನಾವಿನ್ಯತೆಯ ಅತ್ಯುತ್ತಮ ಬೋಧಕರು ಸೇರಿ ಸ್ಥಾಪಿಸಿದ ಕ್ರಿಯೇಟಿವ್ ಪಿಯು ಕಾಲೇಜು ಮೊದಲ ವರ್ಷವೇ ರಾಜ್ಯದ ಶಿಕ್ಷಣ ಕ್ಷೇತ್ರದ ಗಮನ ಸೆಳೆದಿದ್ದು ಹೈಟೆಕ್ ಶಿಕ್ಷಣ, ಪರೀಕ್ಷಾ ತರಬೇತಿ, ಹಾಸ್ಟೆಲ್ ಸೌಲಭ್ಯ ಸೇರಿ ಎಲ್ಲಾ ವಿಷಯದಲ್ಲೂ ದಿ ಬೆಸ್ಟ್ ಅನ್ನಿಸಿಕೊಂಡಿತ್ತು.
ಇದೀಗ ಕಾರ್ಕಳ, ಹಾಸನ ಬಳಿಕ ಸಂಸ್ಥೆಯು ಉಡುಪಿಯಲ್ಲಿ ತನ್ನ ಮತ್ತೊಂದು ಕಾಲೇಜನ್ನು ತೆರೆದಿದೆ. ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ ಈ ಶೈಕ್ಷಣಿಕ ವರ್ಷದಿಂದ ಸೇವೆ ಶುರು ಮಾಡಲಿದೆ. ಉಡುಪಿ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಶಾಖೆಯನ್ನು ತೆರೆಯಲಾಗಿದೆ.
ಕಾರ್ಕಳದಲ್ಲಿ ದಾಖಲೆಯ ನೋಂದಣಿ:
ಹೊಸ ಕಾಲೇಜು ಕಟ್ಟಡ, ಹೊಸ ಹಾಸ್ಟೆಲ್, ಹೈಟೆಕ್ ಶಿಕ್ಷಣ ಸೌಲಭ್ಯ, ಪಠ್ಯ ಮತ್ತು ಶಿಕ್ಷಣ ಚಟುವಟಿಕೆ, ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವಿವಿಧ ಚಟುವಟಿಕೆ, ನೀಟ್, ಸಿಇಟಿ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕಂಪ್ಯೂಟರ್ ಜ್ಞಾನ, ಆನ್ಲೈನ್ ಶಿಕ್ಷಣ, ಹೊಸ ಬಗೆಯ ಕ್ರ್ಯಾಶ್ ಕೋರ್ಸ್ ಸೇರಿ ಹತ್ತು ಹಲವು ವಿಶೇಷ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಕ್ರಿಯೇಟಿವ್ ಕಾಲೇಜು ಒದಗಿಸುತ್ತಿದೆ.
ಕಾರ್ಕಳದ ಸಮೀಪದ ಹಿರ್ಗಾನದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಕಾಲೇಜು ಸ್ಥಾಪಿತವಾಗಿದ್ದು, ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಯೋಗ, ಹೊಸತನದ ಪ್ರಯೋಗಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಮಲೆನಾಡು, ಕರಾವಳಿ, ಬಯಲು ಸೀಮೆ, ಮೈಸೂರು, ಬೆಂಗಳೂರು ಭಾಗದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ದಾಖಲಾಗಿ ಉತ್ತಮ ಶಿಕ್ಷಣ ಪಡೆದಿದ್ದಾರೆ.
ಕ್ರಿಯೇಟಿವ್ ಕಾಲೇಜಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪಿಯು ಶಿಕ್ಷಣದಲ್ಲಿ ಹೊಸ ಪರಿಕಲ್ಪನೆಯ ಸರ್ಟಿಫಿಕೇಟ್ ಕೋರ್ಸ್ ಕೂಡ ಜಾರಿಗೆ ತರಲಾಗಿದೆ. ಪೈಥಾನ್ ಅಪ್ಲಿಕೇಶನ್ ಹಾಗೂ ಡ್ರೋನ್ ಟೆಕ್ನಾಲಜಿ ವಿಷಯವನ್ನು ಈ ಯೋಜನೆಯಡಿ ಕಲಿಸಲಾಗುತ್ತಿದೆ.
ಅನುಭವಿ ಸಂಸ್ಥಾಪಕ ಉಪನ್ಯಾಸಕರ ತಂಡ:
ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಮೂಡಬಿದಿರೆಯ ಸಂಸ್ಥಾಪಕರಲ್ಲಿ ಗಣಪತಿ ಭಟ್(ಎಂಎ ವಿದ್ವಾನ್), ಡಾ.ಗಣನಾಥ ಶೆಟ್ಟಿ(ಎಂ. ಎಸ್ಸಿ, ಪಿಎಚ್.ಡಿ), ಅಮೃತ್ ರೈ (ಎಂಬಿಎ ಫ಼ೈನಾನ್ಸ್), ಆದರ್ಶ ಎಂ.ಕೆ (ಎಂ.ಎಸ್ಸಿ), ಅಶ್ವಥ್ ಎಸ್. ಎಲ್( ಎಂ.ಎಸ್ಸಿ, ಬಿಎಡ್), ವಿಮಲ್ ರಾಜ್ (ಎಂಎ, ಬಿಎಡ್), ಗಣಪತಿ ಕೆ. ಎಸ್(ಎಂ.ಎಸ್ಸಿ, ಬಿಎಡ್) ಇದ್ದಾರೆ. ಇವರೆಲ್ಲರೂ ಕರಾವಳಿಯ ಬೇರೆ ಬೇರೆ ಪ್ರಮುಖ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಕ್ರಿಯೇಟಿವ್ ಕಾಲೇಜು ಸ್ಥಾಪಿಸಿದ್ದಾರೆ.
ಹಾಸನದಲ್ಲೂ ಕರಾವಳಿ ಗುಣಮಟ್ಟದ ಶಿಕ್ಷಣ:
ಕಾರ್ಕಳ ಬಳಿಕ ಹಾಸನದಲ್ಲೂ ಕೂಡ ಕರಾವಳಿ ಗುಣಮಟ್ಟದ ಶಿಕ್ಷಣವನ್ನು ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಸಂಸ್ಥೆ ನೀಡುತ್ತಿದೆ. ಹಾಸನದ ಎಚ್ ಕೆ ಎಸ್ ಕಾಲೇಜು ಜತೆ ಸೇರಿ ಆ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆ ನೀಡುತ್ತಿದೆ. ಹಾಸನ, ಮೈಸೂರು, ತುಮಕೂರು ಮಂಡ್ಯ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ದಾಖಲಾತಿ ನಡೆಯುತ್ತಿದೆ.