ಕಾರ್ಕಳ: ಇಲ್ಲಿನ ಕೌಡೂರು ಗ್ರಾಮದ ತಡ್ಪೆತೋಟದ ಪ್ರದೀಪ್ ಪೂಜಾರಿ(37) ಎನ್ನುವ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ-ಪೂನಾದಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಪ್ರದೀಪ್ , ಕಳೆದ ವರ್ಷ ಊರಿಗೆ ಹಿಂತಿರುಗಿ ತಮ್ಮ ಅಣ್ಣ ಉಮೇಶ್ ಪೂಜಾರಿಯವರೊಂದಿಗೆ ವಾಸವಾಗಿದ್ದರು. ಕೊರೋನಾ ಸಮಯದಲ್ಲಿ ಚುಚ್ಚುಮದ್ದು ತೆಗೆದುಕೊಂಡ ಬಳಿಕ ಎಡಕೈನಲ್ಲಿ ನೋವು ಶುರುವಾಗಿದ್ದು ಪ್ರದೀಪ್ ಗೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಈ ಕಾರಣಕ್ಕೆ ಮನನೊಂದು ಸೋಮವಾರದಂದು ಮನೆಯ ಪಕ್ಕದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.